ಬದಿಯಡ್ಕ: ಕೊಲ್ಲಂಗಾನ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಕೊಲ್ಲಂಗಾನ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದ 31ನೇ ವಾರ್ಷಿಕೋತ್ಸವ, ಯಕ್ಷ ದಶ ವೈಭವ ಕಾರ್ಯಕ್ರಮಗಳು ಸೆ.29 ರಿಂದ ಅ.8ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸೆ.29 ರಂದು ಭಾನುವಾರ ಶ್ರೀದೇವರ ಪ್ರತಿಷ್ಠೆ ನಡೆಯಲಿದೆ. ಅ.3 ರಮದು ಲಲಿತಾ ಪಂಚಮಿಯ ಅಂಗವಾಗಿ ರಾತ್ರಿ ಲಲಿತೋಪಖ್ಯಾನ ಹಾಗೂ ಸಪ್ತಶತೀ ಪಾರಾಯಣ, ರಂಗಪೂಜೆ ನಡೆಯಲಿದೆ. ಅ.4 ರಂದು ಶಾರದಾ ಪೂಜಾರಂಭ, 7 ರಂದು ಮಹಾನವಮಿಯಂದು ಬೆಳಿಗ್ಗೆ 8ಕ್ಕೆ 12 ಕಾಯಿ ಹಣಹೋಮ, ಆಯುಧ ಪೂಜೆ, ಮಧ್ಯಾಹ್ನ 12ರಿಂದ ಶ್ರೀದುರ್ಗಾಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾನವಮಿ ಉತ್ಸವ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.8 ರಂದು ಬೆಳಿಗ್ಗೆ 8ಕ್ಕೆ ಶಾರದಾ ಪೂಜೆ, ವಿದ್ಯಾರಂಭ, 11 ರಿಂದ ಶ್ರೀಸೂಕ್ತ ಪಾರಾಯಣ, ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ವಿಜಯದಶಮಿ ಉತ್ಸವ, ರಂಗಪೂಜೆ, ಮೂಲಪೀಠದಲ್ಲಿ ಶ್ರೀದೇವರ ಸ್ಥಾಪನೆ ನಡೆಯಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಕೊಲ್ಲಂಗಾನ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗುವ ಯಕ್ಷದಶ ವೈಭವದ ಸೆ. 29 ರಂದು ಸಂಜೆ 6 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಗಲಕೋಟೆಯ ರಾಘವೇಂದ್ರ ಫತ್ತೇಪೂರ್ ಅಧ್ಯಕ್ಷತೆ ವಹಿಸುವರು. ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಉದ್ಘಾಟಿಸುವರು. ಬ್ರಹ್ಮಶ್ರೀ ಗಣಾದಿರಾಜ ಉಪಾಧ್ಯಾಯ ಕೊಲ್ಲಂಗಾನ ಆಶೀರ್ವಚನ ನೀಡುವರು. ಕರ್ನಾಟಕ ಸರ್ಕಾರದ ಅಬಕಾರಿ ಉಪ ಆಯುಕ್ತೆ ರೂಪಾ ಎಂ., ಶಿವಮೊಗ್ಗದ ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಉದ್ಯಮಿ ಚೇತನ್ ಕುಮಾರ್ ಶಿವಮೊಗ್ಗ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಜ್ಯೋತಿಷ್ಯರತ್ನ ಪೆರಿಯ ಕಲ್ಯೋಟ್ ಕುಂಞÂಂಬು ನಾಯರ್, ಜ್ಯೋತಿಷ್ಯರತ್ನ ಕೋಡೋತ್ ಸದಾನಂದ ನಾಯರ್ ಹಾಗೂ ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಉಪಸ್ಥಿತರಿರುವರು. ಈ ಸಂದರ್ಭ ಯಕ್ಷಗಾನ ಗುರು ಶ್ರೀಧರ ಐತಾಳ್ ಪಣಂಬೂರು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ರಾತ್ರಿ 8 ರಿಂದ ರಾಜ್ಯ ಪ್ರಶಸ್ತಿ ವಿಜೇತೆ ಜಯಶ್ರೀ ಟೀಚರ್ ಅವರ ನೇತೃತ್ವದ ಯಕ್ಷಚಿಣ್ಣರು ಅಂಗನವಾಡಿ ಪುಟಾಣಿ ಯಕ್ಷಗಾನ ತಂಡದವರಿಂದ ಯಕ್ಷಗಾನ ಬಯಲಾಟ ಹಾಗೂ ರಾತ್ರಿ 9 ರಿಂದ ನಾಟ್ಯಗುರು ಪಡುಮಲೆ ಜಯರಾಮ ಪಾಟಾಳಿ ರಚಿಸಿ ನಿರ್ದೇಶಿಸಿರುವ ರಾಷ್ಟ್ರ ಚರಿತ್ರೆ ಆಧಾರಿತ ಜೈ ಭಾರತಾಂಬ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 10 ರಿಂದ 12ರ ವರೆಗೆ ಯಕ್ಷಮಿತ್ರರು ಬದಿಯಡ್ಕ ತಂಡದವರಿಂದ ಮತ್ಸ್ಯಾವತಾರ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಸೆ.30 ರಂದು ಸಂಜೆ 6ರಿಂದ ಕುಂಟಿಕಾನ ಶ್ರೀಶಂಕರನಾರಾಯಣ ಯಕ್ಷಗಾನ ಕಲಾ ಸಂಘದವರಿಂದ ಇಂದ್ರಜಿತು ಕಾಳಗ, ಅ.1 ರಂದು ಸಂಜೆ 6 ರಿಂದ ಬದಿಯಡ್ಕದ ಶ್ರೀಶಾರದಾಂಬ ಯಕ್ಷಗಾನ ಮಕ್ಕಳ ತಂಡದವರಿಂದ ಪಂಚವಟಿ, ಅ.2 ರಂದು ಮಾನ್ಯ ದೇವರಕೆರೆಯ ಯಕ್ಷನಾಟ್ಯಾಲಯದ ತಂಡದಿಂದ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಚಕ್ರವ್ಯೂಹ, ಅ.3 ರಂದು ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದಿಂದ ಚಕ್ರವರ್ತಿ ದಶರಥ, ಅ.4 ರಂದು ಬಾಯಾರು ದಳಿಕುಕ್ಕಿನ ಶ್ರೀವಾರಾಹಿ ಯಕ್ಷಗಾನ ಕಲಾಸಂಘದವರಿಂದ ಸುದರ್ಶನ ವಿಜಯ, ಅ.5 ರಂದು ಮುಳ್ಳೇರಿಯ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಸಂಘದವರಿಂದ ಗಜೇಂದ್ರಮೋಕ್ಷ, ಅ.6 ರಂದು ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘದವರಿಂದ ಗಿರಿಜಾ ಕಲ್ಯಾಣ, ಅ.7 ರಂದು ಬೆಳಿಗ್ಗೆ 10 ರಿಂದ ಕುಂಬಳೆ ನಾರಾಯಣಮಂಗಲ ಶ್ರೀಮಹಾವಿಷ್ಣು ಗಮಕ ಕಲಾಸಂಘದವರಿಂದ ಗಮಕ ವಾಚನ,ಸಂಜೆ 6 ರಿಂದ ಗುರುಪುರ ಶ್ರೀನೀಲಕಂಠೇಶ್ವರ ಹವ್ಯಾಸಿ ಯಕ್ಷ ಬಳಗದವರಿಂದ ದಕ್ಷಯಜ್ಞ ಯಕ್ಷಗಾನ ಬಯಲಾಟ, ರಾತ್ರಿ 10.30 ರಿಂದ ಮೂರೂರು ರಮೇಶ ಭಂಡಾರಿ ನಿರ್ದೇಶನದಲ್ಲಿ ಕೃಷ್ಣಾರ್ಜುನ ಕಾಳಗ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅ. 8 ರಂದು ಸಂಜೆ 6 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಬೈಂದೂರು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಂ.ಸಿ.ಪೂಜಾರಿ ಅಧ್ಯಕ್ಷತೆ ವಹಿಸುವರು. ತಂತ್ರಿವರ್ಯ ಬ್ರಹ್ಮಶ್ರೀಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಆಶೀರ್ವಚನ ನೀಡುವರು. ಡಾ.ನವೀನ ಸುವರ್ಣ ಮಂಗಳೂರು ಹಾಗೂ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರಾಜೀವಿ ಆರ್. ರೈ ಬೆಳ್ಳಾರೆ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ರವೀಶ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮುಳಿಯಾರು ಶ್ರೀಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ, ಬದಿಯಡ್ಕ ಗ್ರಾ.ಪಂ.ಮಾಜಿ ಸದಸ್ಯ ಮಂಜುನಾಥ ಡಿ.ಮಾನ್ಯ, ಉದ್ಯಮಿ, ಧಾರ್ಮಿಕ ಮುಂದಾಳು ವೇಣುಗೋಪಾಲ ತತ್ವಮಸಿ ಬೋವಿಕ್ಕಾನ ಶುಭಾಶಂಸನೆಗೈಯ್ಯುವರು. ಈ ಸಂದರ್ಭ ಪಟ್ಟಾಜೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದ ಭಾಸ್ಕರ ಕಲ್ಲಕಟ್ಟ ಅವರಿಗೆ ಪ್ರದಾನಗೈಯ್ಯಲಾಗುವುದು. ರಾತ್ರಿ 12 ರಿಂದ ನೀರ್ಚಾಲು ಶ್ರೀವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ಚಕ್ರೇಶ್ವರ ಪರೀಕ್ಷಿತ ಯಕ್ಷಗಾನ ಬಯಲಾಟ ನಡೆಯಲಿದೆ.


