ಮಂಜೇಶ್ವರ : ಕನ್ನಡ ನಾಡು ನುಡಿ ಸಂರಕ್ಷಣೆಗೆ ನಾವು ಕಂಕಣಬದ್ಧರಾಗಿರಬೇಕು. ಅಧ್ಯಾಪಕರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಇದೆ. ಅರ್ಪಣಾ ಮನೋಭಾವದಿಂದ ನಾವು ಕರ್ತವ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಭವಿಷ್ಯವನ್ನು ಬೆಳಗಿಸಲು ಸಾಧ್ಯ. ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸುತ್ತಾ ಕಾರ್ಯನಿರ್ವಹಿಸುವಾಗ ಸಾಮಾಜಿಕ ವ್ಯವಸ್ಥೆಯು ಅದಕ್ಕೆ ಪೂರಕವಾಗಿ ವರ್ತಿಸಬೇಕಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕರು ಹಾಗೂ ಅಂಕಣ ಬರಹಗಾರ, ಖ್ಯಾಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅಭಿಪ್ರಾಯಪಟ್ಟರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವನ್ನು ಮಂಜೇಶ್ವರ ಎಸ್ ಎ ಟಿ ಶಾಲೆಯಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯ ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲ ಕೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ್ ಕೆ ಆರ್, ಎಸ್.ಎ.ಟಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತೇಜೇಸ್ ಕಿರಣ್, ನಿವೃತ್ತ ಮುಖ್ಯ ಶಿಕ್ಷಕ ಟಿ.ಡಿ ಸದಾಶಿವ ರಾವ್, ಸತ್ಯನಾರಾಯಣ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಕುಮಾರಿ ಟೀಚರ್ ಉಪಸ್ಥಿತರಿದ್ದರು. ಉಪಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಉಪಜಿಲ್ಲಾ ಜೊತೆ ಕಾರ್ಯದರ್ಶಿ ಸದಾಶಿವ ಪೊಯ್ಯೆ ವಂದಿಸಿದರು. ಉಪಜಿಲ್ಲಾ ಸಮಿತಿ ಸದಸ್ಯ ರಾಜಾರಾಮ ರಾವ್ ನಿರೂಪಿಸಿದರು. ಕೇಂದ್ರ ಸಮಿತಿಯ ಅಶೋಕ್ ಕೊಡ್ಲಮೊಗರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಹಕರಿಸಿದರು.
ಪೂವಾಹ್ನ ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲ ಕೆ ಧ್ವಜಾರೋಹಣಗೈದರು. ಬಳಿಕ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕೆ ಆರ್, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್ ಪಿ ಬಿ, ಸಂಘಟನೆಯ ಉಪಜಿಲ್ಲಾ ಸಮಿತಿ ಉಪಾಧ್ಯಕ್ಷ ಶಿವರಾಮ ಭಟ್, ಉಪಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸುನಿತ ಎ, ಕೇಂದ್ರ ಸಮಿತಿ ಸದಸ್ಯರಾದ ಸುಕೇಶ್ ಎ ಉಪಸ್ಥಿತರಿದ್ದರು. ಉಪಜಿಲ್ಲಾ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಾರ್ಷಿಕ ವರದಿ ಮಂಡಿಸಿದರು. ಉಪಜಿಲ್ಲಾ ಸಮಿತಿ ಕೋಶಾಧಿಕಾರಿ ನಯನಪ್ರಸಾದ್ ಎಚ್ ಟಿ ಲೆಕ್ಕ ಪತ್ರ ಮಂಡಿಸಿದರು. ರಂಗ ಕಲಾವಿದ ಸದಾಶಿವ ಪೊಯ್ಯೆ, ವಸಂತ ಮೂಡಂಬೈಲ್,ಉಮೇಶ್ ನಾಯ್ಕ್, ಆದಿನಾರಾಯಣ ಭಟ್ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಸಿದರು. ಉಪಜಿಲ್ಲಾ ಘಟಕದ ಜೊತೆ ಕಾರ್ಯದರ್ಶಿ ಜೀವನ್ ಕುಮಾರ್ ಸ್ವಾಗತಿಸಿ ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ಕುಂಜತ್ತೂರು ಶಾಲೆಯ ಕವಿತ ಕೂಡ್ಲು ವಂದಿಸಿದರು. ಕೇಂದ್ರ ಸಮಿತಿ ಸದಸ್ಯ ಜಬ್ಬಾರ್ ನಿರೂಪಿಸಿದರು. ನೂತನ ಸಮಿತಿಗೆ ಅಧ್ಯಕ್ಷೆಯಾಗಿ ಪೈವಳಿಕೆನಗರ ಶಾಲೆಯ ಶಶಿಕಲ ಕೆ, ಉಪಾಧ್ಯಕ್ಷರಾಗಿ ಮಂಗಲ್ಪಾಡಿ ಪ್ರೌಢಶಾಲೆಯ ಸುನಿತ ಎ ಹಾಗೂ ಉದ್ಯಾವರ ತೋಟಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್ , ಕಾರ್ಯದರ್ಶಿಯಾಗಿ ಕುಳೂರು ಶಾಲೆಯ ಜಯಪ್ರಶಾಂತ್ ಪಾಲೆಂಗ್ರಿ , ಜೊತೆಕಾರ್ಯದರ್ಶಿಗಳಾಗಿ ಕವಿತ ಕೂಡ್ಲು ಹಾಗೂ ಸದಾಶಿವ ಪೊಯ್ಯೆ , ಕೋಶಾಧಿಕಾರಿಯಾಗಿ ಆನೆಕಲ್ಲು ಶಾಲೆಯ ಜೀವನ್ ಕುಮಾರ್ ಆಯ್ಕೆಯಾದರು.


