ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಂಸ್ಥೆಯು ಶ್ರೀ ವಿಶ್ವ ಶಿಲ್ಪ ಸಂಘ ಕೊಯಂಬತ್ತೂರು ಸಂಸ್ಥೆಯ ಸಹಯೋಗದೊಂದಿಗೆ ಇಂದು(ಸೆ.22) ಅಪರಾಹ್ನ 2ರಿಂದ ಕೊಯಂಬತ್ತೂರಿನ ಆರ್.ಟಿ.ಎಂ. ತಿರುಮಣ ಮಂಟಪಂ ಅಶೋಕನಗರದಲ್ಲಿ `ಯಕ್ಷ ಸಂಭ್ರಮ' ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಂಗವಾಗಿ ಗಡಿನಾಡಿನ ಹೆಮ್ಮೆಯ ಕಲಾಸಂಘಟನೆ ಯಕ್ಷ ಬಳಗ ಹೊಸಂಗಡಿ ತಂಡದವರಿಂದ `ಅಂಗದ ಸಂಧಾನ' ಯಕ್ಷಗಾನ ತಾಳಮದ್ದಳೆ ಹಾಗೂ `ಭಾರತಿ ಕಲಾ ಆಟ್ರ್ಸ್ ಹೂ ಹಾಕುವಕಲ್ಲು' ತಂಡದಿಂದ `ಜಾಂಬವತಿ ಕಲ್ಯಾಣ' ಯಕ್ಷಗಾನ ಪ್ರದರ್ಶನ ಜರಗಲಿದೆ.
ಸಮಾರಂಭದ ಉದ್ಘಾಟನೆಯನ್ನು ಎಂ.ಲೋಕೇಶ ಸಂರಕ್ಷಣಾ ಸಹಾಯಕರು ಭಾರತೀಯ ಪುರಾತತ್ವ ಸಂರಕ್ಷಣೆ ವಿಭಾಗ ಕಣ್ಣೂರು ಅವರು ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಂಸ್ಥೆಯ ಕಾರ್ಯದರ್ಶಿ ಆರ್.ಆರ್.ಜನ್ನು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ವಿಶ್ವ ಶಿಲ್ಪಸಂಘ ಕೊಯಂಬತ್ತೂರು ಸಂಸ್ಥೆಯ ಅಧ್ಯಕ್ಷ ಯೋಗೇಶ ಎ.ವಿ. ಗೌರವ ಉಪಸ್ಥಿತಿ ಇರಲಿದ್ದು ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಳಿಕ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಶ್ವ ಶಿಲ್ಪ ಸಂಘ ಕೊಯಂಬತ್ತೂರು ಸಂಸ್ಥೆಯ ಅಧ್ಯಕ್ಷ ಯೋಗೇಶ ಎ.ವಿ. ವಹಿಸಲಿದ್ದು, ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಸಮಾರೋಪ ಭಾಷಣಗೈಯಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಹಾಗೂ ವಿಶ್ವ ಶಿಲ್ಪ ಸಂಘ ಕೊಯಂಬತ್ತೂರು ಸಂಸ್ಥೆಯ ಕಾರ್ಯದರ್ಶಿ ಹರಿಶ್ಚಂದ್ರ ಕೆ.ವಿ. ಗೌರವ ಉಪಸ್ಥಿತರಿರುವರು ಎಂದು ಯಕ್ಷಗಾನ ಅಕಾಡೆಮಿ ಪ್ರಕಟಣೆ ತಿಳಿಸಿದೆ.

