ಪೆರ್ಲ: ರಾಜ್ಯ ಸರ್ಕಾರದ ವನಿತಾ ಶಿಶು ಅಭಿವೃದ್ಧಿ ಇಲಾಖೆ ಸಂಯೋಜಿತ ಶಿಶು ಅಭಿವೃದ್ಧಿ ಸೇವಾ ಯೋಜನೆಯ ಆಶ್ರಯದಲ್ಲಿ ಪೋಷಕ ಆಹಾರ ಮಾಸಾಚರಣೆಯ ಅಂಗವಾಗಿ ಪೆರ್ಲ ಅಂಗನವಾಡಿಯಲ್ಲಿ ಪೋಷನ್ ರ್ಯಾಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಲ್ಲಿ ಪೋಷಕ ಆಹಾರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವ ತರಗತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಅಂಗನವಾಡಿಯಲ್ಲಿ ನಡೆಸಲಾಯಿತು. ಇದರ ಅಂಗವಾಗಿ ಮಕ್ಕಳ ಹೆತ್ತವರು ತರಕಾರಿಯಲ್ಲಿ ರಂಗವಲ್ಲಿ ರಚಿಸಿದರು. ಮಕ್ಕಳು ವಿವಿಧ ಪೋಷಕ ಆಹಾರದ ಚಿತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ಐಸಿಡಿಸಿ ಮೇಲ್ವಿಚಾರಕಿ ಸುಲೋಚನ, ಅಂಗನವಾಡಿ ಅಧ್ಯಾಪಕಿ ಅನಂತಿ.ಕೆ, ಸಹಾಯಕಿ ಲಲಿತಾ, ಆಶಾ ಕಾರ್ಯಕರ್ತೆಯರಾದ ಲೀಲಾವತಿ, ಅಕ್ಕಮ್ಮ ಹಾಗೂ ಅಂಗನವಾಡಿ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


