ಮುಳ್ಳೇರಿಯ: ಆದೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೇಟ್(ಎಸ್‍ಪಿಸಿ) ಶಿಬಿರ ನಡೆಯಿತು.
ಮೂರು ದಿನಗಳ ಕಾಲ ನಡೆದ ಶಿಬಿರವನ್ನು ಎಸ್‍ಪಿಸಿ ನೋಡಲ್ ಅಧಿಕಾರಿ, ಕಾಸರಗೋಡು ಡಿವೈಎಸ್‍ಪಿ ಅಸಿನಾರ್ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್ ಅಧ್ಯಕ್ಷತೆ ವಹಿಸಿದ್ದರು. ಆದೂರು ಪೊಲೀಸ್ ಠಾಣೆಯ ಸಿಐ ಪ್ರೇಮ್‍ಸದನ್.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ತಸ್ನಿ ಹಮೀದ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ, ಮಾತೃ ಸಂಘದ ಅಧ್ಯಕ್ಷ ಬೀಫಾತಿಮ, ಹಿರಿಯ ಶಿಕ್ಷಕ ಶಂಕರ್ ರಾಜ್, ನೌಕರ ಸಂಘದ ಕಾರ್ಯದರ್ಶಿ ಯೂಸಫ್.ಕೆ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ.ಕೆ ಸ್ವಾಗತಿಸಿ, ನವಪ್ರಸಾದ್ ವಂದಿಸಿದರು. ಶಿಬಿರದ ಅಂಗವಾಗಿ ಅಭಿರಾಜ್ ಹಸಿರು ಕೇರಳ ವಿಷಯವಾಗಿ ಉಪನ್ಯಾಸ ನೀಡಿದರು. ಶ್ರೀಧರ ಭಟ್ ಯೋಗ ತರಗತಿ ನಡೆಸಿಕೊಟ್ಟರು. ಶಿಕ್ಷಕರಾದ ನಿರ್ಮಲ್ ಕುಮಾರ್, ಶಾಹುಲ್ ಹಮೀದ್ ವಿವಿಧ ವಿಷಯವಾಗಿ ತರಗತಿ ನಡೆಸಿದರು.


