ಮಂಜೇಶ್ವರ: ಗೂವೆದಪಡ್ಪು ಪ್ರೇರಣಾ ಗ್ರಂಥಾಲಯದ ಆಶ್ರಯದಲ್ಲಿ ಬಾಲೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಗುವೆದಪಡ್ಪು ಮರಾಠಿ ಸೇವಾ ಸಂಘದಲ್ಲಿ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಕಮಲಾಕ್ಷ ಡಿ.ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಗ್ರಂಥಾಲಯಗಳು ಗ್ರಾಮೀಣ ಪ್ರದೇಶಗಳ ಪುಸ್ತಕ ಪ್ರಿಯರ ಆಶ್ತಿಯಾಗಿದೆ. ಪುಸ್ತಕಗಳು ಚಿಂತೆಗಳಿಂದ ಮುಕ್ತಿನೀಡಿ ಚಿಂತನೆಗೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳ ಓದಿಗೆ ಮಹತ್ವ ನೀಡಬೇಕು ಎಂದು ತಿಳಿಸಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್, ಸಿದ್ದಿಕ್ ಮಾಸ್ತರ್ ಪಾತೂರು, ಸಂತೋಷ್ ಮಾಸ್ತರ್, ವಸಂತ ಮಾಸ್ತರ್, ಮರಾಠಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಸೊಡಂಕೂರು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಂಥಾಲಯ ವಾರಾಚರಣೆಯ ಅಂಗವಾಗಿ ಚಂದ್ರಹಾಸ ಕತ್ತರಿಕೋಡಿ ಅವರು ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳನ್ನು ನೀಡಿದರು. ಗ್ರಂಥಾಲಯದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ರಾಜೇಶ್ ವಂದಿಸಿದರು. ಬಳಿಕ ಬಾಲೋತ್ಸವದ ಅಂಗವಾಗಿ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಮೋನಪ್ಪ ಕೋಣಿಬೈಲು, ಮೋಹನ ಕಾನ, ಚರಣ್, ಭರತ್, ಕೊರಗಪ್ಪ, ಸರಸ್ವತಿ ಮೊದಲಾದವರು ನೇತೃತ್ವ ವಹಿಸಿದ್ದರು.


