ಮಂಜೇಶ್ವರ: ಕೃಷ್ಣ ರೈ ನೀರ್ಚಾಲು ಇವರ ನೇತೃತ್ವದಲ್ಲಿ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಸಂಚಾರಿ ಯಕ್ಷಗಾನ ಚಿಕ್ಕಮೇಳವು ಶ್ರೀ ಮಹಾಗಣಪತಿ ಭಜನಾ ಮಂದಿರ ಮದಂಗಲ್ಲು ಹಾಗೂ ಪರಿಸರದ ಮನೆಮನೆಗಳಲ್ಲಿ ಪ್ರದರ್ಶನ ನಡೆಸಿತು. ಭಾಗವತರಾಗಿ ಅಡೂರು ಜಯರಾಮ, ಮದ್ದಳೆಗಾರರಾಗಿ ಜೀವನ್ ಕಳತ್ತೂರು, ಈಶ್ವರ ಮಲ್ಲ ಇವರು ಚೆಂಡೆಯೊಂದಿಗೆ ಸಹಕರಿಸಿದರು. ಮುಮ್ಮೇಳದಲ್ಲಿ ಕೃಷ್ಣ ರೈ ನೀರ್ಚಾಲು ಹಾಗೂ ಬಾಲಕೃಷ್ಣ ಸೀತಾಂಗೋಳಿ ಇವರು ರಂಜಿಸಿದರು. ಪ್ರತೀ ಮನೆಯಲ್ಲಿಯೂ ಭಕ್ತಿ ಭಾವಗಳಿಂದ ಕಲೆಯನ್ನು ಆರಾಧಿಸುತ್ತಿರುವುದು ಮಣ್ಣಿನ ಕಲಾಶ್ರೀಮಂತಿಕೆಯ ಸಾಕ್ಷಿಯೆನಿಸಿತು. ಮುಂದಿನ ತಲೆಮಾರಿಗೆ ಯಕ್ಷ ಪರಂಪರೆಯನ್ನು ತಲುಪಿಸುವ ಇವರ ಕಾರ್ಯ ಶ್ಲಾಘನೆಗೊಳಗಾಗಿದೆ.
ಯಕ್ಷಗಾನ ಪರಂಪರೆಯನ್ನು ಉಳಿಸುವಲ್ಲಿ ಸಂಚಾರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಇವರಿಂದ ಸಾರ್ಥಕ ಶ್ರಮ
0
ಸೆಪ್ಟೆಂಬರ್ 19, 2019