ಕಾಸರಗೋಡು: ಮೀನುಗಾರಿಕೆ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಮರೈನ್ ಡಾಟಾ ಕಲೆಕ್ಷನ್, ಜುವೆನಲ್ ಫಿಷಿಂಗ್ ಸಂಬಂಧ ಕಲಿಕೆ ಇತ್ಯಾದಿ ಸಮೀಕ್ಷೆ ಮಾಹಿತಿ ಸಂಗ್ರಹ ನಡೆಸುವ ನಿಟ್ಟಿನಲ್ಲಿ ತಾತ್ಕಾಲಿಕ ಎನ್ಯುಮರೇಟರ್ ನೇಮಕಾತಿ ಕರಾರು ಮೇರೆಗೆ ನಡೆಸಲಾಗುವುದು. ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ ಯಾ ಸ್ನಾತಕೋತ್ತರ ಪದವಿ, ಎಂ.ಎಸ್.ಸಿ. ಝುವಾಲಜಿ ಯಾ ಎಂ.ಎಸ್.ಸಿ.ಬಯಾಲಜಿ ಯಾ ಎಂ.ಎಸ್.ಸಿ. ಅಕ್ವಾಟಿಕ್ ಬಯಾಲಜಿ ಹೊಂದಿರುವವರು ಮತ್ತು ಈ ಹಿಂದೆ ಮರೈನ್ ಕ್ಯಾಚ್ ಅಸಿಸ್ಟೆಂಟ್ ಸರ್ವೇ ನೌಕರಿ ನಡೆಸಿದ ಅನುಭವ ಇದ್ದವರಿಗೆ ಆದ್ಯತೆಯಿದೆ. 21ರಿಂದ 36 ವರ್ಷ ವಯೋಮಾನದವರು ಆಗಿರಬೇಕು. ಯಾತ್ರಾ ಭತ್ತೆ ಸಹಿತ ಪ್ರತಿ ತಿಂಗಳು 25 ಸಾವಿರ ರೂ. ವೇತನ ನೀಡಲಾಗುವುದು. ಆಸಕ್ತರು ಅಸಲಿ ಅರ್ಹತಾಪತ್ರಗಳ, ನಕಲುಗಳ ಸಹಿತ ಸೆ.24ರಂದು ಮಧ್ಯಾಹ್ನ 2.30ಕ್ಕೆ ಕಾಂಞಂಗಾಡ್ ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಎನ್ಯುಮರೇಟರ್ ನೇಮಕ
0
ಸೆಪ್ಟೆಂಬರ್ 21, 2019