ಕಾಸರಗೋಡು: 25 ನೇ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯನ್ನು ಖ್ಯಾತ ತುಳು ಕಾದಂಬರಿಗಾರ್ತಿ ರಾಜಶ್ರೀ ಟಿ.ರೈ ಪೆರ್ಲ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ತುಳು ಕೂಟದವರಿಂದ ಹೊಟೇಲ್ ಕಿದಿಯೂರ್ನ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟ ಸಮಾರಂಭದ ವೇದಿಕೆಯಲ್ಲಿ ಖ್ಯಾತ ತುಳು ಸಂಶೋಧಕರು ಮತ್ತು ವಿದ್ವಾಂಸರು ಆದ ಪೆÇ್ರ|ವಿವೇಕ್ ರೈ ಮತ್ತು ಖ್ಯಾತ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರು ಕಾದಂಬರಿಗಾರ್ತಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕøತ ಕೃತಿ `ಚೌಕಿ' ಇದೇ ವೇದಿಕೆಯಲ್ಲಿ ಬಿಡುಗಡೆಗೊಂಡಿತು.


