HEALTH TIPS

ಶೃಂಗೇರಿ ಸ್ವಾಮಿಗಳ ಭೇಟಿ, ಗುರು ಕಾಣಿಕೆ ಸಮರ್ಪಣೆ- ಧರ್ಮ ಮಾರ್ಗದಲ್ಲಿ ನಡೆದರೆ ಶ್ರೇಯಸ್ಸು : ಜಗದ್ಗುರು ಶ್ರೀ ವಿಧುಶೇಖರ ಭಾರತೀ


      ಕಾಸರಗೋಡು: ಶೃಂಗೇರಿ ಗುರುಪರಂಪರೆಯ ಶಿಷ್ಯ ಸಮೂಹದವರಾದ ರಾಮ ಕ್ಷತ್ರೀಯ, ರಾಮರಾಜ ಕ್ಷತ್ರೀಯ, ಕೋಟೆಯವರ ಸಮಾಜ ಬಾಂಧವರಿಂದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಅವರ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಚಾತುರ್ಮಾಸ್ಯಾಚರಣೆ ಸಂದರ್ಭದಲ್ಲಿ  ಶ್ರೀ ಶೃಂಗೇರಿಯ ನರಸಿಂಹ ವನದಲ್ಲಿ  ಉಭಯ ಜಗದ್ಗುರುಗಳನ್ನು ಸುಮಾರು ಮೂರು ಸಾವಿರದಷ್ಟಿದ್ದ ಶ್ರೀ ರಾಮರಾಜ ಕ್ಷತ್ರೀಯ ಸಮಾಜ ಬಾಂಧವರು  ಸಾಮೂಹಿಕವಾಗಿ ದರ್ಶನ ಮಾಡಿ ಭಿಕ್ಷಾವಂದನೆ, ಪಾದಪೂಜೆ, ಹೊರೆಕಾಣಿಕೆ, ಗುರುಕಾಣಿಕೆಗಳನ್ನು ಸಮರ್ಪಿಸಿ ಅವರ ಪರಮಾನುಗ್ರಹದ ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದುಕೊಂಡರು.
     ಬಳಿಕ ಸಮಾಜ ಬಾಂಧವರನ್ನು ಉದ್ದೇಶಿಸಿ ಅನುಗ್ರಹ ಭಾಷಣ ಮಾಡಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶ್ರೀ ರಾಮರಾಜ ಕ್ಷತ್ರೀಯ ಸಮಾಜ ಬಾಂಧವರು ಶ್ರೀ ಶೃಂಗೇರಿ ಮಠದ ಅತ್ಯಂತ ಪ್ರೀತಿ ಪಾತ್ರವಾದ ಶಿಷ್ಯ ವರ್ಗದವರು. ಅವರು ಮಾಡಿದ ಧಾರ್ಮಿಕ ಸೇವೆಯು ಅತ್ಯಂತ ಶ್ರೇಷ್ಠವಾದುದು ಎಂದರು.
       ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ , ಬೆಂಗಳೂರು ಮತ್ತು ಮ್ಯೆಸೂರು ಜಿಲ್ಲೆಗಳಿಂದ ಬಂದ ಸಮಾಜ ಬಾಂಧವರು ಅಪರಾಹ್ನ ಶ್ರೀ ಚಂದ್ರಶೇಖರ ಭಾರತೀ ಸಭಾ ಭವನದಲ್ಲಿ ಜರಗಿದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
     ಧಾರ್ಮಿಕ ಉಪನ್ಯಾಸವನ್ನು ಶೃಂಗೇರಿ ಸಂಸ್ಕøತ ವಿಶ್ವವಿದ್ಯಾನಿಲಯದ ಸಂಸ್ಕøತ ವಿದ್ವಾಂಸರಾದ ಡಾ.ಈಶ್ವರ್ ಗಣೇಶ್ ಭಟ್ ನೆರವೇರಿಸಿದರು.
      ವೇದಿಕೆಯಲ್ಲಿ ಕೋಟೆಕಾರ್ ಶೃಂಗೇರಿ ಮಠದ ಆಡಳಿತಾಧಿಕಾರಿ ಸತ್ಯಶಂಕರ ಬೊಳ್ಳಾವ, ಕುಂದಾಪುರ ಶೃಂಗೇರಿ ಮಠದ ಪ್ರಾಂತ್ಯಾಧಿಕಾರಿ ಲೋಕೇಶ್ ಅಡಿಗ, ಗುರುವಂದನಾ ಕೇಂದ್ರ ಸಮಿತಿಯ ಅಧ್ಯಕ್ಷರಾದ  ಯೋಗಿಶ್ ಕುಮಾರ್ ಜೆಪ್ಪು, ಕಾರ್ಯದರ್ಶಿ ಸೀತಾರಾಮ್ ಕೊಪ್ಪಲು, ಸಹಸಂಚಾಲಕರಾದ ಪ್ರಮೋದ್ ಕುಮಾರ್ ಪಿ. ಉಪಸ್ಥಿತರಿದ್ದರು.
      ಪ್ರಮೋದ್ ಕುಮಾರ್ ಪಿ. ಸ್ವಾಗತಿಸಿ, ವಂದಿಸಿದರು. ದೇವದಾಸ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.
    ಸಮಾಜಭಾಂದವರ ಪರವಾಗಿ ಡಾ.ರವೀಂದ್ರ ಮಂಗಳೂರು ಅವರು ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದರು. ಉಭಯ ಜಗದ್ಗುರುಗಳಿಗೆ ಮಂಗಳೂರು ಜಿಲ್ಲಾ ಸಂಘದ ಅಧ್ಯಕ್ಷರಾದ  ಮುರಳೀದರ್ ಅಜಿತ್ ಮತ್ತು ಡಾ.ರವೀಂದ್ರ,  ಕಾಸರಗೋಡು ಜಿಲ್ಲಾ ಸಂಘದ ಅಧ್ಯಕ್ಷರಾದ ಬಿ.ಪಿ. ವೆಂಕಟರಮಣ, ಚಿಕ್ಕಮಗಳೂರು ಸಂಘದ ಅಧ್ಯಕ್ಷರಾದ ಶ್ರೀನಿವಾಸ ಕೊಪ್ಪ, ಕಾಸರಗೋಡು ಯುವ ಸಂಘದ ಭರತೇಶ್ ಮತ್ತು ಶಿವರಾಜ್, ಶಿವಮೊಗ್ಗ  ಜಿಲ್ಲಾ ಸಂಘದ ಅಧ್ಯಕ್ಷ  ಶ್ರೀನಿವಾಸ್, ಕಾರವಾರ ಜಿಲ್ಲಾ ಸಂಘದ ಅಧ್ಯಕ್ಷರಾದ ರಾಜೇಶ್, ಕುಂದಾಪುರ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಉಡುಪಿ ಸಂಘದ ಅಧ್ಯಕ್ಷ ಕೆ.ಟಿ.ನಾಯ್ಕ, ಹೆಬ್ರಿ ಸಂಘದ ಅಧ್ಯಕ್ಷ ಶ್ರೀನಿವಾಸ, ಕಾರ್ಕಳ ಸಂಘದ ಅಧ್ಯಕ್ಷ ಪ್ರಸನ್ನ, ಪುತ್ತೂರು ಸಂಘದ ಅದ್ಯಕ್ಷ ಸುಬ್ರಹ್ಮಣ್ಯ ಕೆಮ್ಮಿಂಜೆ, ಬೆಳ್ತಂಗಡಿ ಸಂಘದ ಅಧ್ಯಕ್ಷ ರತ್ನಾಕರ್, ಮೂಡಬಿದ್ರೆ ಸಂಘದ ಅದ್ಯಕ್ಷ ಸುರೇಂದ್ರ, ಉಳ್ಳಾಲ ರಾಮ ಕ್ಷತ್ರೀಯ ಯುವ ಸಂಘದ ಅಧ್ಯಕ್ಷ  ಅಮಿತ್ ರಾಜ್ ಬೇಕಲ್, ಸುರತ್ಕಲ್ ಸಂಘದ ಅಧ್ಯಕ್ಷ ಧರ್ಮಪ್ರಕಾಶ್ ಹಾಗೂ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಡಾ.ಪ್ರಭಾಕರ್ ಹೆಚ್, ಮಾಧವ ಪುತ್ತೂರು, ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು, ಡಾ.ಮಂಜುಳಾ ರಾವ್, ವಿಷ್ಣು ಮಾಧವ ಭಟ್, ಯಶವಂತ್ ಬಿ.ಕೆ.ಉಡುಪಿ, ಡಾ.ದೀಪಕ್ ರಾವ್ ಬೋಳಾರ್, ಚಂದ್ರಶೇಖರ ಕಲ್ಪತರು, ನಾಗರಾಜ್ ಕಾಮಧೇನು ಕುಂದಾಪುರ, ಪ್ರೇಮ್ ಕಿಶೋರ್ ಕುಂಬಳೆ, ಲೋಕೇಶ್, ದಿನೇಶ್ ನಾಗರಕಟ್ಟೆ, ನಿರಂಜನ ಕೊರಕೋಡು ಮೊದಲಾದವರು ಸಮಷ್ಠಿ ಭಿಕ್ಷಾ ಕಾಣಿಕೆಯನ್ನು ಅರ್ಪಿಸಿದರು.
          ಕಾರ್ಯಕ್ರಮದಲ್ಲಿ ಲಕ್ಷದ್ವೀಪದ ಜಿಲ್ಲಾ  ಸೆಶನ್ಸ್ ನ್ಯಾಯಧೀಶರಾದ ರಮಾಕಾಂತ್ ಬೇಕಲ್ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries