ಮಧೂರು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 5ನೇ ಸಮ್ಮೇಳನದ ಅಂಗವಾಗಿ ನಡೆದ ಅಂಚೆ ಕಾರ್ಡ್ ಕಥಾ ಸ್ಪರ್ಧೆಯಲ್ಲಿ ಪದ್ಯಾಣ ಕೆ ಗಣಪತಿ ಭಟ್ ಬಾಯಾರು ಅವರ ತಪ್ಪಾದ ಮನಸು ಪ್ರಥಮ ಬಹುಮಾನ ಪಡೆದಿದೆ. ಉಡುಪುಮೂಲೆ ಅನುಪಮಾ ರಾಘವೇಂದ್ರ ಅವರ ಮಳೆ ನೀರಿನ ಕೊಯ್ಲು ದ್ವಿತೀಯ ಹಾಗೂ ತೆಂಕಬೈಲು ಸೂರ್ಯನಾರಾಯಣ ಕರೋಪಾಡಿ ಅವರ ಮೂಕಹಕ್ಕಿ ತೃತೀಯ ಬಹುಮಾನ ಪಡೆದಿವೆ.
ಸೌಮ್ಯ ಗುರು ಕಾರ್ಲೆ ಅವರ ತಾಯಿ, ಅಶ್ವಿನಿ ಬರ್ವೆ ಅವರ ಮಾಡಿದ್ದುಣ್ಣೋ ಮಹಾರಾಯ, ಶ್ರೀನಿಧಿ ಎ ಕೊಂಬೆಟ್ಟು ಅವರ ಹಂಸದ ಸಂಸಾರ, ಎಸ್ ಕೃಷ್ಣ ನೆಲ್ಲಿ ಬೆಂಗಳೂರು ಅವರ ಪ್ರೇಮ ಜಾಲ, ಸುಶೀಲಾ ಪದ್ಯಾಣ ಅವರ ಮಗು, ಸುಗಂಧಿ ಮರದಮೂಲೆ ಅವರ ಮರೀಚಿಕೆ ಹಾಗೂ ಲಲಿತಾ ಎಂ ಭಟ್ ಅಡ್ಯನಡ್ಕ ಅವರ ನಾನೂ ನನ್ನ ಕನಸು ಎಂಬ ಕಥೆಗಳು ಪ್ರೋತ್ಸಾಹಕ ಬಹುಮಾನ ಗಳಿಸಿದೆ. ಚುಟುಕು ರಚನಾ ಸ್ಪರ್ಧೆಯಲ್ಲಿ ಜಯಶ್ರೀ ಬಿ ಕದ್ರಿ ಅವರ ಮೌನ ಚುಟುಕು ಪ್ರಥಮ ಬಹುಮಾನ ಗಳಿಸಿದೆ. ಬೆಳ್ಳೂರಿನ ವಿಜಯರಾಜ ಪುಣಿಂಚಿತ್ತಾಯರ ರಹಸ್ಯ ದ್ವಿತೀಯ ಹಾಗೂ ಪದ್ಮಾವತಿ ಏದಾರು ಅವರ ಕಾಂಕ್ರಿಟ್ ಚುಟುಕಗಳು ತೃತಿಯ ಬಹುಮಾನ ಪಡೆದಿವೆ. ಶಶಿಕಲಾ ಕೆ ಕುಂಬಳೆ ಅವರ ನಾವಿರೋದೆ ಹೀಗೆ, ಪ್ರಮೀಳಾ ಚುಳ್ಳಿಕ್ಕಾನ ಅವರ ಮಲ್ಲಿಗೆ, ಕೆ ರಾಮಕೃಷ್ಣ ಸುಳ್ಯ ಅವರ ಸೂತ್ರಗಳು, ಚಂದನಾ ಕೆ ಎಸ್ ಮಂಗಳೂರು ಅವರ ಹಸಿರ ಪರಿಸರ, ಜ್ಯೋತ್ಸ್ನಾ ಕಡಂದೇಲು ಅವರ ಯೋಧ, ಸುಶೀಲಾ ಕೆ ಪದ್ಯಾಣ ಅವರ ಒಗ್ಗಟ್ಟು ಹಾಗೂ ಪುಷ್ಪಾ ಕೆ ಕಕ್ಕಪಾಡಿ ಅವರ ಸಾಧನೆಯ ಕಡೆಗೆ ಚುಟುಕಗಳು ಪ್ರೋತ್ಸಾಹಕ ಬಹುಮಾನ ಗಳಿಸಿವೆ. ಕಥೆ ಹಾಗೂ ಚುಟುಕು ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಸಹಕರಿಸಿದ್ದರು.ಸೆ.29ರಂದು ಕಾಸರಗೋಡಿನ ಜೆಪಿ ಕಾಲನಿ ಕನ್ನಡ ಗ್ರಾಮದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ 5ನೇ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.