ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ದೊರೆತ 14 ಲ್ಯಾಪ್‍ಟಾಪ್ ಹಾಗೂ 5 ಪ್ರೊಜೆಕ್ಟರ್‍ಗಳ ಉದ್ಘಾಟನಾ ಕಾರ್ಯಕ್ರಮ ಶಾಲಾ ಗ್ರಂಥಾಲಯದಲ್ಲಿ ಗುರುವಾರ ಜರಗಿತು.
ಕಾರ್ಯಕ್ರಮವನ್ನು ಮೀಂಜ ಗ್ರಾಮ ಪಂಚಾಯತಿ ಅರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಕಮಿಟಿ ಮುಖ್ಯಸ್ಥ ಕೃಷ್ಣ ಇವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಜೇಶ್ವರ ಬ್ಲಾಕ್ ನಿರೂಪಣಾಧಿಕಾರಿ ವಿಜಯಕುಮಾರ್.ಪಿ ಉಪಸ್ಥಿತರಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್. ಆರ್.ಎಂ, ಮಾತೃಸಂಘದ ಅಧ್ಯಕ್ಷೆ ಕೈರುನ್ನೀಸ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸುಧಾಕರ.ವಿ ಸ್ವಾಗತಿಸಿ, ಶಾಲಾಭಿವೃದ್ದಿ ಸಮಿತಿ ಕಾರ್ಯದರ್ಶಿ ರಘುವೀರ್ ರಾವ್ ವಂದಿಸಿದರು. ಶಿಕ್ಷಕ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣ ಶರ್ಮ.ಕೆ ಹಾಗೂ ಮಹಾಬಲೇಶ್ವರ ಭಟ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.


