ಉಪ್ಪಳ: ಕಠಿಣ ಪರಿಶ್ರಮ ಹಾಗು ನಿರಂತರ ಅಧ್ಯಯನವನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಕ್ಷೇತ್ರದಲ್ಲೂ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಬಡ್ಡಿ ಕ್ಷೇತ್ರದಲ್ಲಿ ಭವ್ಯಶ್ರೀ ಏದಾರು ಮಾಡಿದ ಸಾಧನೆ ಅಭಿನಂದನಾರ್ಹ ಎಂದು ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಬಾಬು ಯು.ಪಚ್ಲಂಪಾರೆ ಹೇಳಿದರು.
ಅವರು ರಾಷ್ಟ್ರ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿನಿ ಪೈವಳಿಕೆ ಏದಾರು ನಿವಾಸಿ ಭವ್ಯಶ್ರೀ ಅವರನ್ನು ಅವರ ಮನೆಯಭಿತ್ತೀಚೆಗೆ ಅಭಿನಂದಿಸಿ ಮಾತನಾಡಿದರು.
ಸಮಾರಂಭದ ಅ`À್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಅಧ್ಯಾಪಕ ರಾಮಚಂದ್ರ ಏದಾರು ಮಾತನಾಡಿ ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯು ಇಂತಹ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿರುವುದು ನಿಜವಾಗಿಯೂ ಶ್ಲಾಘನಾರ್ಹ ಎಂದರು. ರಾಮ ಏದಾರು, ಮೋಹನ ಯು.ಮಂಜೇಶ್ವರ, ಶಶಿಧರ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಆದರ್ಶ ಪಟ್ಟತ್ತಮೊಗರು ಸ್ವಾಗತಿಸಿ, ವಂದಿಸಿದರು.


