ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿಯ ಲೈಫ್ ಮಿಷನ್ ಫಲಾನುಭವಿಗಳ ಕುಟುಂಬ ಸಂಗಮ ಮತ್ತು ಅದಾಲತ್ ಇಂದು(ಸೋಮವಾರ) ನಡೆಯಲಿದೆ. ಮಂಜೇಶ್ವರ ಕಲಾಸ್ಪರ್ಶ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರವನ್ನು ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸುವರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಅತ್ಯುತ್ತ ಚಟುವಟಿಕೆ ನಡೆಸಿದ ಗ್ರಾಮಪಂಚಾಯತಿಗಳಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಬಹುಮಾನ ವಿತರಿಸುವರು. ನಿರ್ವಹಣೆ ಸಿಬ್ಬಂದಿಯನ್ನು ಬಡತನ ನಿವಾರಣೆ ವಿಭಾಗ ನಿರ್ದೇಶಕ ಕೆ.ಪ್ರದೀಪನ್ ಗೌರವಿಸುವರು. ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೇವೆ ಒದಗಿಸುವ ನಿಟ್ಟಿನಲ್ಲಿ ಅದಾಲತ್ ನಡೆಯಲಿದೆ.

