HEALTH TIPS

ಅಡೂರಿನಲ್ಲಿ ಯುವಜನ ಶಿಬಿರ


     ಮುಳ್ಳೇರಿಯ: ಅಶ್ವಮೇಧ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಅಡೂರು ಹಾಗೂ ನೆಹರು ಯುವಕೇಂದ್ರ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ನಡೆದ ಯುವಜನ ಶಿಬಿರವನ್ನು ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು.
       ಅಶ್ವಮೇಧ ಕ್ಲಬ್ ಅಧ್ಯಕ್ಷ ಪ್ರಜ್ವಲ್ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯ ಗ್ರಾಮಾಧಿಕಾರಿ ದನಂಜಯನ್, ಅಡೂರು ವಿದ್ಯಾಭಾರತಿ ವಿದ್ಯಾಲಯದ ಉಪಾಧ್ಯಕ್ಷ ವೆಂಕಟ್ರಾಜ್, ದೇಲಂಪಾಡಿ ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲಾ, ಎನ್.ವೈ.ಕೆ. ಕಾಸರಗೋಡು ಇದರ ರಾಹುಲ್ ಶುಭಹಾರೈಸಿದರು.
        ಕಾರ್ಯಕ್ರಮದಲ್ಲಿ ಅಶ್ವಮೇಧ ಕ್ಲಬ್ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ, ಕ್ಲಬ್ ಸದಸ್ಯ ಪ್ರಮೋದ್ ಪಾಂಡಿ ವರದಿಯನ್ನು ವಾಚಿಸಿದರು, ಯುವ ನಾಯಕತ್ವ ಬಗ್ಗೆ ನ್ಯಾಯವಾದಿ ಕೆ.ಶ್ರೀಕಾಂತ್, ಆರೋಗ್ಯದ ಬಗ್ಗೆ ಅಡೂರು ಪಿ.ಎಚ್.ಸಿ. ಜೂನಿಯರ್ ಆರೋಗ್ಯಾಧಿಕಾರಿ ಸುರೇಶ್ ಬಾಬು ಹಾಗೂ ನೆಹರು ಯುವಕ ಕೇಂದ್ರದ ಕಾರ್ಯಕ್ರಮಗಳು ಎಂಬ ಬಗ್ಗೆ ಎನ್‍ವೈಕೆಯ ಸಹದ್ ತರಗತಿ ನಡೆಸಿದರು. ಪ್ರದೀಪ್ ಕುಮಾರ್ ಬಳ್ಳಕ್ಕಾನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries