ಕಾಸರಗೋಡು: ಕೇರಳ ಶಾಫ್ ಆಂಡ್ ಕಮರ್ಶಿಯಲ್ ಇಸ್ಟಾಬ್ಲಿಷ್ ಮೆಂಟ್ ವರ್ಕರ್ಸ್ ವೆಲ್ಫೇರ್ ಫಂಡ್ ನೇತೃತ್ವದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಸದಸ್ಯರಾಗಿರುವ ಕಾರ್ಮಿಕರ ಮಕ್ಕಳಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾಸರಗೋಡಿನ ಹೋಟೆಲ್ ಸ್ಪೀಡ್ ವೇ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಮಂಡಳಿಯ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ವಿ ಅಬ್ದುಲ್ ಸಲಾಮ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಕಲ್ಯಾಣ ಮಂಡಳಿಯ ಪರಿಹಾರ ಪ್ರಯತ್ನಗಳು ಕೋವಿಡ್ ಅವಧಿಯಲ್ಲಿ ಬಿಕ್ಕಟ್ಟಿನಲ್ಲಿರುವ ಕಾರ್ಮಿಕರಿಗೆ ದೊಡ್ಡ ಪರಿಹಾರವಾಗಿದೆ ಎಂದು ಶಾಸಕರು ಈ ಸಂದರ್ಭ ಹೇಳಿದರು. ಶೈಕ್ಷಣಿಕ ಸಾಧಕರಿಗೆ ನೀಡಲಾಗುವ ವಿದ್ಯಾರ್ಥಿವೇತನವು ಅವರ ಪೆÇೀಷಕರಿಗೆ ಸಹಕಾರಿಯಾಗುತ್ತದೆ ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
ಶಾಸಕರು ನಗದು ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಪಡನ್ನಕ್ಕಾಡ್ ನ ಟಿ ಶ್ವೇತಾ (ಬಿಎಸ್‍ಸಿ ಪ್ಲಾಂಟ್ ಸೈನ್ಸ್), ಕಾಞಂಗಾಡಿನ ಕೆ.ವಿ.ಅಮೃತ (ಎಂ.ಕಾಂ) ಮತ್ತು ತಚ್ಚಂಗಾಡಿನ ಕೆ. ಅಂಜಲಿ (ಎಂಎಸ್‍ಸಿ ಪ್ರಾಣಿಶಾಸ್ತ್ರ) ಅವರಿಗೆ ಪ್ರಶಸ್ತಿ ನೀಡಲಾಯಿತು. ಕೋವಿಡ್ ನಿಬಂಧನೆಗಳ ಕಾರಣ ಸಂಕಷ್ಟದಲ್ಲಿರುವ ವವರಿಗೆ ಸರ್ಕಾರವು ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿಯ ಮೂಲಕ ಸಾಕಷ್ಟು ಸಹಾಯವನ್ನು ನೀಡುತ್ತಿದೆ. ಇದರ ಭಾಗವಾಗಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ವಿತರಿಸಲಾಗುತ್ತದೆ. ಕೋವಿಡ್ ನಿಯಮಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್, ಚಿಯಾಕ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಂ.ಸತೀಶನ್, ಮೀರಾ ಚಂದ್ರನ್, ಜಯೇಶ್ ಉಪಸ್ಥಿತರಿದ್ದರು.


