ಬದಿಯಡ್ಕ: ಹಿಂದಿ ಅಧ್ಯಾಪಕ್ ಮಂಚ್‍ನ ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಉಪಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಹಿಂದಿ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಹಿರಿಯ ನಿವೃತ್ತ ಹಿಂದಿ ಅಧ್ಯಾಪಕ, ಎಇಒ ಕುಮಾರನ್ ಮಾಸ್ತರ್ ಅವರ ಮನೆಯಲ್ಲಿ ಅವರಿಗೆ ಶಾಲು ಹೊದಿಸಿ ಗುರುವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಿಂದಿ ಅಧ್ಯಾಪಕರಾದ ವಿನೋದ್ ರಾಜ್ ಕಲ್ಲಕಟ್ಟ, ವಿದ್ಯಾ ಟೀಚರ್ ಇಚ್ಲಂಪಾಡಿ, ದಿನೇಶ್ ಮಂಜೇಶ್ವರ ಮೊದಲಾದವರು ಶುಭಹಾರೈಸಿದರು. ವಿಶೇಷ ಅತಿಥಿಯಾಗಿ ಪ್ರಶಾಂತ್ ಮಾಸ್ತರ್ ಮುಂಡಿತ್ತಡ್ಕ ಉಪಸ್ಥಿತರಿದ್ದರು.
ಬದಿಯಡ್ಕದ ನವಜೀವನ ಪ್ರೌಢ ಶಾಲೆಯ ಹಿಂದಿ ಅಧ್ಯಾಪಕ ನಾರಾಯಣ ಅಸ್ರ ಅವರು ಸ್ವಾಗತಿಸಿ, ಪಳ್ಳತ್ತಡ್ಕ ಶಾಲೆಯ ಸುಶೀಲ ಟೀಚರ್ ವಂದಿಸಿದರು. ರಾಮಚಂದ್ರ ಮಾಸ್ತರ್ ಮೀಯಪದವು ಪ್ರಾಸ್ತಾವಿಕವಾಗಿ ಮಾತನಾಡಿದರು.


