ಕಾಸರಗೋಡು: ಪ್ರಯಾಣಿಕರ ಸಂಖ್ಯೆ ಹೆಚ್ಚತೊಡಗುವುದರೊಂದಿಗೆ ಕೆಎಸ್‍ಆರ್‍ಟಿಸಿ ಕಾಸರಗೋಡು ಡಿಪೆÇೀದಿಂದ ಇನ್ನಷ್ಟು ಬಸ್‍ಗಳ ಸಂಚಾರ ಆರಂಭಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಇದರಂಗವಾಗಿ ಬಂದಡ್ಕ ಸಹಿತ ವಿವಿಧೆಡೆಗೆ ಸರ್ವೀಸ್ ನಡೆಸುವ ಕೆಎಸ್‍ಆರ್‍ಟಿಸಿ ಬಸ್ ಭಾನುವಾರವೂ ಸಂಚಾರ ನಡೆಸುವ ಕುರಿತು ಆಲೋಚಿಸುತ್ತಿದೆ.
ಕೆಎಸ್‍ಆರ್‍ಟಿಸಿ ಕಾಸರಗೋಡು ಡಿಪೆÇೀದಲ್ಲಿ 101 ಬಸ್‍ಗಳಿವೆ. ಈಗ ಇದರಲ್ಲಿ 45 ಬಸ್‍ಗಳು ಪ್ರತಿದಿನ ಸಂಚಾರ ನಡೆಸುತ್ತಿವೆ. 45 ಸರ್ವೀಸ್‍ಗಳಲ್ಲಿ ಅತೀ ಹೆಚ್ಚು ಬಸ್‍ಗಳು ತಲಪಾಡಿ ರೂಟ್‍ನಲ್ಲಿ ಸಂಚರಿಸುತ್ತಿವೆ. ಕಾಂಞಂಗಾಡ್, ಕಣ್ಣೂರು, ಬಂದಡ್ಕ, ಪೆರ್ಲ, ಪಂಜಿಕಲ್ಲು ಮೊದಲಾದ ರೂಟ್‍ಗಳಲ್ಲಿ ಇತರ ಬಸ್‍ಗಳು ಸಂಚರಿಸುತ್ತಿವೆ. ಕೋವಿಡ್ ರೋಗ ಹರಡುವ ಮೊದಲು ಕೆಎಸ್‍ಆರ್‍ಟಿಸಿ ಡಿಪೆÇೀಗೆ ಪ್ರತಿ ದಿನ 13 ಲಕ್ಷ ರೂ. ಆದಾಯ ಬರುತ್ತಿತ್ತು. ಕೋವಿಡ್‍ನ ಬಳಿಕ 2 ಲಕ್ಷಕ್ಕೆ ಇಳಿದಿದೆ. ಈಗ ಅದು 5 ಲಕ್ಷ ರೂ.ಗೆ ಏರಿದೆ. ಈ ಹಿಂದೆ ಮಂಗಳೂರು ರೂಟ್‍ನಲ್ಲಿ 45 ಬಸ್‍ಗಳು ಸಂಚರಿಸುತ್ತಿತ್ತು. ಕೋವಿಡ್‍ನ ಹಿನ್ನೆಲೆಯಲ್ಲಿ ಮಂಗಳೂರಿಗೆ ಸಂಚಾರ ಮೊಟಕುಗೊಂಡಿದೆ. ಆದರೆ ಮಂಗಳೂರಿಗೆ ಬೆಳಗ್ಗೆ ಹಾಗು ಸಂಜೆ ಪ್ರಯಾಣಿಸಲು 40 ಮಂದಿ ಸಿದ್ಧರಾಗಿ ಡಿಪೆÇೀದಲ್ಲಿ ಹೆಸರು ನೊಂದಾಯಿಸಿದರೆ ಮಂಗಳೂರಿಗೆ ಪ್ರತ್ಯೇಕ ಸರ್ವೀಸ್ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಈ ಪ್ರಯಾಣಕ್ಕೆ ಮೂವರು ಹೆಸರು ನೊಂದಾಯಿಸಿದ್ದಾರೆ.


