HEALTH TIPS

ಮಲಬಾರ್ ಅಭಿವೃದ್ಧಿ ಮಂಡಳಿಯ ಹೊಸ ಕಚೇರಿಯ ಉದ್ಘಾಟನೆ

        ಕೋಝಿಕ್ಕೋಡ್: ಕೆವಿನ್ ಆರ್ಕೇಡ್ (ಬೇಬಿ ಬಜಾರ್) ನಲ್ಲಿರುವ ಮಲಬಾರ್ ಡೆವಲಪ್ಮೆಂಟ್ ಕೌನ್ಸಿಲ್ ಕಚೇರಿಯನ್ನು ಎಂ.ವಿ.ಆರ್ ಕ್ಯಾನ್ಸರ್ ಸೆಂಟರ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಸಿ.ಎನ್. ಜಯಕೃಷ್ಣನ್ ಮಂಗಳವಾರ ಉದ್ಘಾಟಿಸಿದರು.

         ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಕಳೆದ ಕೆಲವು ವರ್ಷಗಳಿಂದ ಮಲಬಾರ್ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಕಚೇರಿಯ ಬದಲಾವಣೆಯು ನಗರದಲ್ಲಿನ ದಟ್ಟಣೆ ಮತ್ತು ಪಾಕಿರ್ಂಗ್ ಸೌಲಭ್ಯಗಳ ಅಗತ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.

        ಕೋವಿಡ್ ನಿಬಂಧನೆಗಳ ಪ್ರಕಾರ ಮಲಬಾರ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚೆವಲಿಯರ್ ಸಿ ಅವರು ಸಭೆಯನ್ನು ಸರಳ ರೀತಿಯಲ್ಲಿ ಉದ್ದೇಶಿಸಿ ಮಾತನಾಡಿದರು. ಇ ಚಕ್ಕುನ್ನಿ ಅಧ್ಯಕ್ಷತೆ ವಹಿಸಿದ್ದರು.

         ಕ್ಯಾಂಡಿ ಸ್ಟ್ರೀಟ್ ನ ವಾಹನಗಳ ನಿಷೇಧದಿಂದಾಗಿ ಬೇಬಿ ಬಜಾರ್‍ನಲ್ಲಿರುವ ಕಚೇರಿಗೆ ತಲಪಲು ಅಡಚಣೆಯುಂಟಾಗುವ ಕಾರಣ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ತಮ್ಮ ಮುಖ್ಯ ಭಾಷಣದಲ್ಲಿ  ತಿಳಿಸಿದರು.

        ವಾಹನಗಳ ಮೇಲಿನ ನಿರ್ಬಂಧವು ಅಪ್ಪರ್ ಸ್ಟ್ರೀಟ್‍ನಲ್ಲಿರುವ ಅನೇಕ ಸಂಸ್ಥೆಗಳನ್ನು ಮುಚ್ಚುವಂತೆ ಮಾಡಿದೆ  ಇತರ ಸಂಸ್ಥೆಗಳು ಒಂದೊಂದಾಗಿ ಸ್ಥಳಾಂತರಗೊಳ್ಳುತ್ತಿದೆ ಎಂದು ಅವರು ಹೇಳಿದರು, ಶೀಘ್ರದಲ್ಲೇ ನಿಷೇಧವನ್ನು ತೆಗೆದುಹಾಕದಿದ್ದರೆ, ಅಪ್ಪರ್ ಸ್ಟ್ರೀಟ್ ಮತ್ತು ಅದರ ಸುತ್ತಮುತ್ತಲಿನ ವಾಣಿಜ್ಯ ವೈಭವವು ನಶಿಸಲಿದೆ ಎಂದರು. 

         ಶಿಕ್ಷಕಿ ಉಷಾದೇವಿ, ಕ್ಯಾಲಿಕಟ್ ಸಿಟಿ ಸರ್ವಿಸ್ ಬ್ಯಾಂಕ್ ಜನರಲ್ ಮ್ಯಾನೇಜರ್ ಸಾಜು ಜೇಮ್ಸ್, ಸಹಾಯಕ ಜನರಲ್ ಮ್ಯಾನೇಜರ್ ಕೆ.ಕೆ.ರಾಕೇಶ್ ಮತ್ತು ಮಾಜಿ ಪೋಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಜಯಚಂದ್ರನ್, ಅನಿತಾ. ಪಿ, ಮಲಬಾರ್ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳು ಪಿ.ಐ.ಅಜಯನ್, ಕುನ್ನೊತ್ ಅಬೂಬಕರ್, ಖಜಾಂಚಿ ಎಂ.ವಿ.ಕುಂಜಮು, ನಗರ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಇ. ಅಶ್ರಫ್, ನ್ಯೂ ಬಝಾರ್ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಸಿ.ವಿ.ಗೀವರ್, ಸಿಲ್ ಪಿಲ್ ಮ್ಯೂಥ್ಯೂ, ಸಾದಿಕ್  ಶುಭಾಶಯಗಳನ್ನು ಅರ್ಪಿಸಿದರು. ಮಲಬಾರ್ ಅಭಿವೃದ್ಧಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಅಯ್ಯಪ್ಪನ್ ಸ್ವಾಗತಿಸಿ, ಸಿಸಿ ಮನೋಜ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries