ಪೆರ್ಲ: ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದೆ ಹದಿನಾರನೇ ವರ್ಷದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಕಾರ್ಯಕ್ರಮ ಶುಕ್ರವಾರದಿಂದ ರಿಂದ 28ರ ವರೆಗೆ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 9ಕ್ಕೆ ಶ್ರೀಗಣಪತಿ ಹೋಮ, 10 ರಿಂದ ಶ್ರೀಸತ್ಯನಾರಾಯಣ ಪೂಜೆ, 10.30ಕ್ಕೆ ಪೆರ್ವೊಡಿ ವಿವೇಕಾನಂದ ಸಾಂಸ್ಕøತಿಕ ಕೇಂದ್ರದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಪರಾಹ್ನ 3.30 ರಿಂದ ಎನ್.ಕೆ. ರಾಮಚಂದ್ರ ಭಟ್ ಪನೆಯಾಲ ಅವರಿಂದ ಏಕಪಾತ್ರ ಯಕ್ಷಗಾನ ಬಾಹುಕ ಪ್ರದರ್ಶನ ಗೊಂಡಿತು. ಸಂಜೆ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಪ್ರವೇಶ- ಯಜ್ಞ ಸಂರಕ್ಷಣೆ, ಸೀತಾಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಇಂದು ಬೆಳಿಗ್ಗೆ 9.30 ರಿಂದ ಪೂರ್ವರಂಗ, 10.30 ರಿಂದ ಯಕ್ಷಗಾನ ಬಯಲಾಟ ಪಾಂಚಜನ್ಯ, ಮಧ್ಯಾಹ್ನ 1 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡುವರು. ಉಪನ್ಯಾಸಕ, ಯಕ್ಷಗಾನ ಕಲಾವಿದ ಕೆ.ರಾಮಚಂದ್ರ ಭಟ್ ಪನೆಯಾಲ ಅಧ್ಯಕ್ಷತೆ ವಹಿಸುವರು.ಕರ್ನಾಟಕ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕ ಜಗದೀಶ್ ಬಲ್ಲಾಳ್ ಜಿ. ಅಧ್ಯಕ್ಷತೆ ವಹಿಸುವರು. ಹಿರಿಯ ಮದ್ದಳೆಗಾರ ಚಂದ್ರಶೇಖರ ಭಟ್ ಕೊಂಕಣಾಜೆ, ಶಿಕ್ಷಕ ದೇವದಾಸ್ ಅರ್ಕುಳ, ಅರವಿಂದ ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿವಿಧ ಸಾಧಕರಿಗೆ ಅಭಿನಂದನೆ,ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಮೇದಿನಿ ನಿರ್ಮಾಣ ಮಹಿಷ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ಕೇಂದ್ರದ ವಿದ್ಯಾರ್ಥಿಗಳಿಂದ ನಡೆಯಲಿದೆ.




