ಕೊಚ್ಚಿ: ಬಿಜೆಪಿ ಕಾರ್ಯಕರ್ತರ ಮೇಲೆ ಮತ್ತೆ ಹಲ್ಲೆ ಪ್ರಕರಣವೊಂದು ವರದಿಯಾಗಿದ್ದು, ಉತ್ತರ ಪರಾವೂರು ವ್ಯಾಪ್ತಿಯಲ್ಲಿ ಎಸ್.ಡಿ.ಪಿ.ಐ. ಕಾರ್ಯಕರ್ತರ ತಂಡ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಸ್.ಡಿ.ಪಿ.ಐ ಗುಂಪು ವಿಜಯ ಯಾತ್ರೆಯ ಧ್ವಜಗಳನ್ನು ಹಾರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿತು. ಮಾರಣಾಂತಿಕ ಆಯುಧಗಳನ್ನು ಹೊಂದಿದ ಗುಂಪು ಈ ದಾಳಿಯನ್ನು ನಡೆಸಿದೆ.
ಆರ್.ಎಸ್.ಎಸ್. ಕಾರ್ಯಕರ್ತ ನಂದು ಅವರನ್ನು ಮೊನ್ನೆ ಆಲಪ್ಪುಳದಲ್ಲಿ ಎಸ್.ಡಿ.ಪಿ.ಐ ಗ್ಯಾಂಗ್ ಹತ್ಯೆ ಮಾಡಿತ್ತು. ಇದರ ಬೆನ್ನಿಗೇ ಎಸ್.ಡಿ.ಪಿ.ಐ ಗೂಂಡಾಗಳು ಮತ್ತೊಂದು ದಾಳಿ ನಡೆಸಿರುವುದು ಮತೀಯ ತೀವ್ರವಾದ ಕೇರಳದಲ್ಲಿ ಬೀಡುಬಿಟ್ಟಿರುವುದಕ್ಕೆ ಸೂಚನೆ ಎನ್ನಲಾಗುತ್ತಿದೆ.


