ತಿರುವನಂತಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ(ಭಾನುವಾರ) ತಿರುವನಂತಪುರಕ್ಕೆ ಆಗಮಿಸುವರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಯ ಸಮಾರೋಪ ಸಮಾರಂಭವನ್ನು ಅವರು ಉದ್ಘಾಟಿಸುವರು.
ಅಮಿತ್ ಶಾ ಇಂದು ಸಂಜೆ 6.30 ಕ್ಕೆ ವಿಶೇಷ ವಿಮಾನದಲ್ಲಿ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿ ಭಾನುವಾರ ಬೆಳಿಗ್ಗೆ ರಸ್ತೆ ಮೂಲಕ ಕನ್ಯಾಕುಮಾರಿಗೆ ತೆರಳಲಿದ್ದಾರೆ. ಅವರು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಭಾಗವಹಿಸುವರು.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಮಧ್ಯಾಹ್ನ 3.50 ಕ್ಕೆ ತಿರುವನಂತಪುರಕ್ಕೆ ಹಿಂದಿರುವರು. ಬಳಿಕ ಶ್ರೀ ರಾಮಕೃಷ್ಣ ಮಠದಲ್ಲಿ ಸನ್ಯಾಸಿ ಸಂಘದ ಸಭೆಯಲ್ಲಿ ಭಾಗವಹಿಸುವರು. ಸಂಜೆ 5.30 ಕ್ಕೆ ಶಂಖುಮುಖಂ ಬೀಚ್ನಲ್ಲಿ ವಿಜಯಯಾತ್ರೆಯ ಸಮಾರೋಪವನ್ನು ಅವರು ಉದ್ಘಾಟಿಸುವರು.



