HEALTH TIPS

ರಾಜ್ಯದಲ್ಲಿ ಲಾಕ್‌ಡೌನ್ ನಿಯಂತ್ರಣ; ಸಾರ್ವಜನಿಕರಿಂದ ಬೆಂಬಲ


        ತಿರುವನಂತಪುರ: ಎರಡು ದಿನಗಳ ಕೊರೋನಾ ರೋಗನಿರೋಧಕಕ್ಕೆ ಕ್ಯೆಗೊಂಡ ನಿಯಂತ್ರಣಗಳಿಗೆ ರಾಜ್ಯಾದ್ಯಂತ ಸಹಾನುಭೂತಿಯ ಪ್ರತಿಕ್ರಿಯೆ ಈವರೆಗೆ ಲಭ್ಯವಾಗಿದೆ.  ಪೊಲೀಸ್ ಇಲಾಖೆಯ ಪ್ರಕಾರ, ಜನರು ಸಾಮಾನ್ಯವಾಗಿ ರಾಜ್ಯದ ಮಹಾನಗರಗಳು ಸೇರಿದಂತೆ ಒಳನಾಡುಗಳಲ್ಲಿ ತುರ್ತು ಅಗತ್ಯಗಳಿಗೆ ಮಾತ್ರ  ಮನೆಯಿಂದ ಹೊರತರಳಬೇಕು ಎಂಬ ಸಲಹೆಗೆ ಬೆಂಬಲ ವ್ಯಕ್ತವಾಗಿದೆ.
       ಇಂದು ನಡೆಯಲಿರುವ ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಮುಂದೂಡದ ಕಾರಣ, ಕೆಎಸ್ಆರ್ಟಿಸಿ ಬಸ್ ಸೇವೆ  ಒದಗಿಸುತ್ತಿದೆ.  ಕೆಎಸ್‌ಆರ್‌ಟಿಸಿ 60 ಶೇ. ಸೇವೆಯನ್ನು ನೀಡಲು ನಿರ್ಧರಿಸಿದೆ. ಇಂದು ಬೆಳಿಗ್ಗೆ  ಆಟೋ ಟ್ಯಾಕ್ಸಿ ಚಾಲಕರು ತುರ್ತು ವಿಷಯಗಳಿಗೆ ತೆರಳುವವರಿಗೆ  ಮಾತ್ರ ಸೇವೆಯೊದಗಿಸಲು ಅನುಮತಿಸಲಾಗಿದೆ.
       ಇಂದು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಿಗೆ ರಜಾದಿನವಾಗಿದೆ.  ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನಿರ್ಬಂಧಗಳೊಂದಿಗೆ ಪ್ರಯಾಣಿಸಲು ಅವಕಾಶ ನೀಡುವ ನಿರ್ಧಾರವನ್ನೂ ಅನುಸರಿಸಲಾಗಿದೆ.  ಸಂಸ್ಥೆಗಳ ಗುರುತಿನ ಚೀಟಿ ಕಡ್ಡಾಯವಾಗಿರುವುದರಿಂದ ಪೊಲೀಸರು ತನಿಖೆಗೊಳಪಡಿಸಿ ತೆರಳಲು ಅನುಮತಿ ನೀಡುತ್ತಿದ್ದಾರೆ.
   ಕಾಸರಗೋಡು,ಕುಂಬಳೆ,ಉಪ್ಪಳ,ಹೊಸಂಗಡಿ ಸಹಿತ ರಾ.ಹೆದ್ದಾರಿ ಸಂಚಾರದಲ್ಲಿ ಸಂಪೂರ್ಣ ಬಂದ್ ನಂತೆ ಸಂಚಾರ ಮೊಟಕುಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries