ಕಾಸರಗೋಡು: ಈ ದೇವಾಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ಭಕ್ತಿಗೀತೆಗಳ ಜೊತೆಗೆ ಕೋವಿಡ್ ಜಾಗೃತಿ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಕಾಸರಗೋಡಿನ ನೆಲ್ಲಿಕ್ಕಲ್ ತುರುತ್ತಿ ಕಳಿಕಂ ನೀಲಮಂಗಲಂ ಭಗವತಿ ದೇವಸ್ಥಾನದಲ್ಲಿ ಪ್ರಸ್ತುತ ಕೋವಿಡ್ ಸೋಂಕಿನ ವಿರುದ್ಧದ ಎಚ್ಚರಿಕೆಯನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುತ್ತಿದೆ. ಚೆರ್ವತ್ತೂರು ಪಂಚಾಯತ್ ನಲ್ಲಿ, ಕೋವಿಡ್‍ನ ಹರಡುವಿಕೆಯು ಆತಂಕಕಾರಿಯಾಗಿ ಮುಂದುವರಿಯುತ್ತಿರುವ ಮಧ್ಯೆ ದೇವಾಲಯದ ಇಂತಹದೊಂದು ಪ್ರಯತ್ನ ಎಲ್ಲೆಡೆಗೂ ಮಾದರಿಯಾಗಿದೆ.
ಪಂಚಾಯತ್ ವ್ಯಾಪ್ತಿಯ 16 ನೇ ವಾರ್ಡ್ ವಿಜಿಲೆನ್ಸ್ ಸಮಿತಿಯು ಕೋವಿಡ್ ಸೋಂಕಿನ ಎರಡನೇ ಅಲೆಯನ್ನು ತಡೆಯಲು ನಿರಂತರ ಹೋರಾಟದಲ್ಲಿದೆ. ಈ ನಿಟ್ಟಿನಲ್ಲಿ ಜಾಗ್ರತಾ ಸಮಿತಿಯು ದೇವಾಲಯದಲ್ಲಿ ಭಕ್ತಿಗೀತೆಗಳ ಜೊತೆಗೆ ಕೋವಿಡ್ ಜಾಗೃತಿ ಅಭಿಯಾನ ನಡೆಸುವ ಬಗ್ಗೆ ದೇವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು. ನೆಲ್ಲಿಕಲ್ ತುರುತ್ತಿ ಕಳಿಕಂ ನೀಲಮಂಗಲಂ ಭಗವತಿ ದೇವಾಲಯ ಕೇಂದ್ರ ಸಮಿತಿ ಸದಸ್ಯರು ಜನರ ಇಚ್ಚೆಯನ್ನು ಅರಿತುಕೊಂಡು ಪಂಚಾಯಿತಿಯ ಕೋವಿಡ್ ರಕ್ಷಣೆಯಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿತು. ಈಗ ದಶಕಗಳಿಂದ ಭಕ್ತರು ಸೇರಿದಂತೆ ಸ್ಥಳೀಯರು ಕೇಳುತ್ತಿದ್ದ ಭಕ್ತಿಗೀತೆಗಳ ಜೊತೆಗೆ ಕೋವಿಡ್ ಹರಡುವುದನ್ನು ತಡೆಯುವ ಎಚ್ಚರಿಕೆ ಧ್ವನಿವರ್ಧಕಗಳ ಮೂಲಕ ಧ್ವನಿಸಲು ಪ್ರಾರಂಭಿಸಿದೆ.
ಉತ್ತರ ಮಲಬಾರಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ನೆಲ್ಲಿಕಲ್ ತುರುತ್ತಿ ಕಳಿಕಂ ನೀಲಮಂಗಲಂ ಭಗವತಿ ದೇವಸ್ಥಾನವು ಸಹೋದರತ್ವ ಮತ್ತು ವಿವಿಧ ಜಾತಿ ಮತ್ತು ಧರ್ಮಗಳ ಸಹಯೋಗದೊಂದಿಗೆ ಪ್ರಸಿದ್ಧವಾಗಿದೆ. ಸರ್ಕಾರ, ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತದ ಕೋರಿಕೆಯ ಮೇರೆಗೆ ಈ ವರ್ಷವೂ ಜಾತ್ರೆ, ಉತ್ಸವಗಳನ್ನು ರದ್ದುಪಡಿಸಲಾಗಿದೆ. ಗ್ರಾಮ ಪಂಚಾಯಿತಿ 16 ನೇ ವಾರ್ಡ್ ಸದಸ್ಯ ಮುನೀರ್ ತುರುತಿ, 17 ನೇ ವಾರ್ಡ್ ಸದಸ್ಯ ಡಿ.ಎಂ.ಕಣ್ಣನ್, ಸೆಕ್ಟರ್ ಮ್ಯಾಜಿಸ್ಟ್ರೇಟ್ ವ್ಯಾಟ್ಸನ್ ಪಿಲಿಕೋಡ್ ಮತ್ತು ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ಕೆ.ವಿ. ಅಂಬಾಟಿ ಮತ್ತು ಪ್ರಧಾನ ಕಾರ್ಯದರ್ಶಿ ಕೃಷ್ಣನ್ ಮೆಟ್ಟಕ್ ಅವರ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಕೋವಿಡ್ ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ.


