HEALTH TIPS

ಕೊರೊನಾ ಚಿಕಿತ್ಸೆ; ಸಿಆರ್‌ಡಿಐ Umifenovir ಔಷಧ ಪ್ರಯೋಗ ಯಶಸ್ವಿ

                   ನವದೆಹಲಿ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಮೈಲುಗಲ್ಲನ್ನು ಸಾಧಿಸಿದ್ದು, ಕೇಂದ್ರ ಔಷಧ ಸಂಶೋಧನಾ ಸಂಸ್ಥೆ (ಸಿಡಿಆರ್‌ಐ) ತನ್ನ ಸೋಂಕು ನಿರೋಧಕ ಔಷಧ 'ಯುಮಿಫೆನೊವಿರ್' ಪ್ರಯೋಗ ಯಶಸ್ವಿಯಾಗಿರುವುದಾಗಿ ತಿಳಿಸಿದೆ.


                 132 ಕೊರೊನಾ ರೋಗಿಗಳ ಮೇಲೆ ಯುಮಿಫೆನೊವಿರ್ ಔಷಧ ಪ್ರಯೋಗ ನಡೆಸಲಾಗಿದೆ. ದಿನಕ್ಕೆ ಎರಡು ಬಾರಿ ಐದು ದಿನಗಳವರೆಗೆ ಈ ಔಷಧವನ್ನು ಸೋಂಕಿನ ವಿರುದ್ಧ ಪರೀಕ್ಷಿಸಿದ್ದು, ಸೌಮ್ಯ, ಮಧ್ಯಮ ರೋಗಲಕ್ಷಣದ ಹಾಗೂ ಲಕ್ಷಣ ರಹಿತ ರೋಗಿಗಳಲ್ಲಿ ಔಷಧವು ಸೋಂಕಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿರುವುದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

               ಕೆಜಿಎಂಯು, ರಾಮ್‌ ಮನೋಹರ್ ಲೋಹಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಗೂ ಲಖನೌ ಎರಾಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಈ ಔಷಧದ ಪ್ರಯೋಗ ನಡೆಸಲಾಗಿದೆ.

            ಯುಮಿಫೆನೊವಿರ್ ಸೋಂಕು ನಿರೋಧಕ ಔಷಧಿಯಾಗಿದ್ದು, ರಷ್ಯಾ, ಚೀನಾ ಹಾಗೂ ಇತರ ದೇಶಗಳಲ್ಲಿ 20 ವರ್ಷಗಳಿಗಿಂತ ಹೆಚ್ಚು ಕಾಲ ಇನ್‌ಫ್ಲುಯೆನ್ಸ ಹಾಗೂ ನ್ಯುಮೋನಿಯಾಗೆ ಔಷಧವಾಗಿ ಬಳಸಲಾಗುತ್ತಿದೆ. ಹೀಗಾಗಿ ಈ ಔಷಧದ ಮೊದಲ ಎರಡು ಪ್ರಯೋಗಗಳನ್ನು ಭಾರತದಲ್ಲಿ ಕಡ್ಡಾಯವಾಗಿ ಮಾಡಲಿಲ್ಲ.

                ಈ ಆಸ್ಪತ್ರೆಗಳ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಹಾಗೂ ಹೋಂ ಕ್ವಾರಂಟೈನ್‌ನಲ್ಲಿ ದಾಖಲಾದ 132 ರೋಗಿಗಳ ಮೇಲೆ ನೆರವಾಗಿ ಮೂರನೇ ಹಂತದ ಪ್ರಯೋಗಗಳನ್ನು ಸಿಡಿಆರ್‌ಐ ನಡೆಸಿತು ಎಂದು ಸಿಡಿಆರ್‌ಐ ನಿರ್ದೇಶಕ ಪ್ರೊ. ತಪಸ್ ಕುಂದು ಹೇಳಿದ್ದಾರೆ.

                   ಅಧ್ಯಯನದಲ್ಲಿ, ಔಷಧ ಪಡೆದುಕೊಂಡ ನಂತರ ರೋಗಿಯ ಫಲಿತಾಂಶಗಳನ್ನು ವೈದ್ಯರು ನಿಖರವಾಗಿ ಮೌಲ್ಯಮಾಪನ ಮಾಡಿರುವುದು ಫಲಿತಾಂಶದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಯುಮಿಫೆನೊವಿರ್ (800 ಮಿ.ಗ್ರಾಂ) ಮಾತ್ರೆಯನ್ನು ಎರಡು ಡೋಸ್ ನೀಡಿದ ನಂತರ, ಅಂದರೆ ದಿನಕ್ಕೆ ಎರಡು ಬಾರಿ ನೀಡಿದರೆ ಸೌಮ್ಯ, ಮಧ್ಯಮ ಅಥವಾ ಲಕ್ಷಣ ರಹಿತ ರೋಗಿಗಳಲ್ಲಿ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿರುವುದು ಕಂಡುಬಂದಿದೆ. ಐದು ದಿನಗಳಲ್ಲಿ ದಿನಕ್ಕೆ ಎರಡು ಬಾರಿ ಈ ಔಷಧ ಸೇವನೆ ಮಾಡಿದರೆ ಸೋಂಕು ಶೂನ್ಯವಾಗುತ್ತದೆ ಎಂಬುದನ್ನು ಫಲಿತಾಂಶ ತೋರಿಸಿದೆ. ಈ ಔಷಧಿಯಿಂದ ರೋಗಿಗಳು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಿಲ್ಲ ಹಾಗೂ ರೋಗಲಕ್ಷಣಗಳು ಸಹ ತೀವ್ರವಾಗಿ ಬದಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

          ಸಿಡಿಆರ್‌ಐನ ಯುಮಿಫೆನೊವಿರ್ ಸೋಂಕಿನ ವಿರುದ್ಧ ತೀಕ್ಷ್ಣವಾಗಿ ಪ್ರತಿರೋಧ ಒಡ್ಡಲು ಸಮರ್ಥವಾಗಿರುವುದನ್ನು ಪ್ರಯೋಗ ಸಾಬೀತುಪಡಿಸಿದೆ.

            ಔಷಧ ನಿಯಂತ್ರಕ ಸಂಸ್ಥೆ ಈ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಮೌಲ್ಯಮಾಪನ ಮಾಡಿದೆ ಹಾಗೂ ಇನ್ನಷ್ಟು ನಿಖರ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಔಷಧಕ್ಕೆ ತುರ್ತು ಅನುಮೋದನೆ ನೀಡಲು ಹೆಚ್ಚು ಸೌಮ್ಯ, ಲಕ್ಷಣರಹಿತ ರೋಗಿಗಳ ಮೇಲೆ ಅಧ್ಯಯನ ಮುಂದುವರೆಸಲು ತಂಡ ನಿಯೋಜಿಸಿದೆ ಎಂದು ಸಿಆರ್‌ಡಿಐ ನಿರ್ದೇಶಕರು ತಿಳಿಸಿದ್ದಾರೆ.

ಗ್ಲೆನ್ ಮಾರ್ಕ್ ಸಂಸ್ಥೆಯು ಫಾವಿಪಿರಾವಿರ್ ಆಧಾರಿತ ಫಾಬಿಫ್ಲೂ ಔಷಧಿಯ 3 ಹಂತದ ಕ್ಲಿನಿಕಲ್ ಟ್ರಯಲ್ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಫಾವಿಪಿರಾವಿರ್ ಹಾಗೂ ಯುಮಿಫೆನೊವಿರ್(Umifenovir) ಸಂಯೋಜನೆಯ ಹೊಸ ಡ್ರಗ್ ಬಳಸಿ ಕ್ಲಿನಿಕಲ್ ಟ್ರಯಲ್ ಕೂಡ 3 ಹಂತದಲ್ಲಿ ನಡೆಸಲಿದೆ. ಇದನ್ನು ಎಲ್ಲಾ ಬಗೆಯ ಕೊವಿಡ್ 19 ಸೋಂಕಿತರಿಗೆ ನೀಡಲು ಸಂಸ್ಥೆ ಬಯಸಿದೆ.

                 ಸದ್ಯಕ್ಕೆ ಈ ಔಷಧದ ಪ್ರಯೋಗ ಯಶಸ್ವಿಯಾಗಿರುವುದು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಮತ್ತೊಂದು ಪ್ರಮುಖ ಆಯ್ಕೆ ದೊರೆತಂತಾಗಿದೆ.

          ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮುಖ್ಯವಾಗಿ ಮೂರು ಲಸಿಕೆಗಳನ್ನು ನೀಡಲಾಗುತ್ತಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಫುಟ್ನಿಕ್ ವಿ ಲಸಿಕೆಯನ್ನು ನೀಡುತ್ತಿದ್ದು, ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಲಸಿಕೆಗೆ ಅನುಮೋದನೆ ನೀಡಲಾಗಿದೆ.

             ದೇಶದಲ್ಲಿ ಬುಧವಾರ 27,176 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 3,51,087 ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries