ಮುಳ್ಳೇರಿಯ: ರಾಪ್ ಹಾಡಿನ ಮೂಲಕ ಕರ್ನಾಟಕ ರಾಜ್ಯ ಮಟ್ಟದ ರಾಪರ್ ಆಗಿ ಬುಕ್ ಆಫ್ ರೇಕಾರ್ಡ್"ಗೆ ಬೆಳ್ಳೂರಿನ ಶಶಾಂಕ್ ರೈ ಕಳ್ವಾಜೆ ಸೇರ್ಪಡೆಗೊಂಡಿದ್ದಾರೆ. ರೈ ಸನ್ (ಖಚಿisoಟಿ) ಎಂಬ ರಾಪ್ ನಾಮಾಂಕಿತದೊಂದಿಗೆ ಈತನ ರಾಪ್ ಸಾಂಗ್ ಬೆಂಗಳೂರಿನಲ್ಲಿ ನಡೆದ ಬಕ್ ಆಫ್ ರೇಕಾಡ್ರ್ಸ್ ನಲ್ಲಿ ದಾಖಲಾಗಿದೆ.
ಕೇರಳ- ಕರ್ನಾಟಕದ ಗಡಿನಾಡದ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತಿನ ಶಶಾಂಕ್ ರೈ ಕಳ್ವಾಜೆ ಎಂಬ ಪ್ರತಿಭಾನ್ವಿತ ಹಾಡುಗಾರ ರಾಪ್ ಸಾಂಗ್ ಎಂಬ ವಿಶಿಷ್ಟ ಪ್ರಯತ್ನದ ಮೂಲಕ ಇದೀಗ ಕರ್ನಾಟಕ ಬುಕ್ ಆಫ್ ರೇಕಾರ್ಡ್"ಗೆ ಸೇರ್ಪಡೆಗೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಗ್ರಾಮೀಣತೆಯ ಸೊಗಡನ್ನು ಪಸರಿಸಿದ್ದಾನೆ.
ಕಳ್ವಾಜೆಯ ಪ್ರಗತಿಪರ ಕೃಷಿ ಕುಟುಂಬದ ಸಾಹಿತಿ ದಯಾನಂದ (ಬಾಲಕೃಷ್ಣ) ರೈ - ಮಂಜುಳಾ ರೈ ದಂಪತಿಗಳ ಪುತ್ರನಾದ ಶಶಾಂಕ್ ರೈ ದಕ್ಷಿಣ ಭಾರತದ ಪ್ರಬಲ ರಾಪ್ (ಖಚಿಠಿ) ತಂಡವಾದ ಕರ್ನಾಟಕದ ಬೆಂಗಳೂರು ಮೂಲದ ಖಿeಚಿm ಅhಡಿಚಿಥಿuಗೆ ಆಯ್ಕೆಯಾಗಿ 56 ರಾಪರ್ಸ್ ಗಳ ಜತೆಗೆ ಹಾಡಿದ ರಾಪ್ ಸಾಂಗ್ ಕರ್ನಾಟಕದ ಬುಕ್ ಆಫ್ ರೇಕಾಡ್ರ್ಸ್ ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಬೆಳ್ಳೂರು ಸರ್ಕಾರಿ ಶಾಲಾ ಹಳೆ ವಿದ್ಯಾರ್ಥಿಯಾದ ಶಶಾಂಕ್ ರೈ ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಡಿಪೆÇ್ಲೀಮ ಇನ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ನಿರತರಾಗಿದ್ದಾನೆ. ಬಾಲ್ಯದಲ್ಲಿ ತೆಂಕು ತಿಟ್ಟು ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಾಲ ಕಲಾವಿದನಾಗಿದ್ಸ ಶಶಾಂಕ್ ರೈ ಗಾಯನದ ಬಗ್ಗೆ ಅಭಿರುಚಿ ಮೂಡಿಸಿಕೊಂಡು ರಾಪ್ ಮೂಲಕ ವಿಭಿನ್ನ ಪ್ರತಿಭಾ ಪ್ರದರ್ಶನಕ್ಕೆ ತಾಲೀಮು ನಿರತನಾಗಿದ್ದ. ಕೆಲವು ತುಳು ಕನ್ನಡ ರಾಫ್ ಸಾಂಗ್ ಗಳನ್ನು ಇನ್ ಸ್ಟಾ ಗ್ರಾಂ,ಯೂಟ್ಯೂಬ್, ಫೆಸ್ಬುಕ್ ಮೂಲಕ ಪ್ರಸ್ತುತಪಡಿಸಿದ್ದು ಕರ್ನಾಟಕದ ಟೀಮ್ ಚಿರಾಯು ತಂಡ ಶಶಾಂಕ್ ನ ಈ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿತ್ತು.

