HEALTH TIPS

ಜಿಲ್ಲೆಯಲ್ಲಿ ಡಿಜಿಟಲ್ ಭೂ ಸಮೀಕ್ಷೆ ಆರಂಭ; ಮುಟ್ಟತ್ತೋಡಿ ಗ್ರಾಮದಲ್ಲಿ 514 ಹೆಕ್ಟೇರ್‍ನಲ್ಲಿ ಡ್ರೋನ್ ಸಮೀಕ್ಷೆ

                               

            ಕಾಸರಗೋಡು: ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಡಿಜಿಟಲ್ ಭೂ ಸಮೀಕ್ಷೆಯ ಅಂಗವಾಗಿ ಜಿಲ್ಲೆಯಲ್ಲಿ ಡಿಜಿಟಲ್ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು. ಕಾಸರಗೋಡು ತಾಲೂಕಿನ ಮುಟ್ಟತ್ತೋಡಿ ಗ್ರಾಮದಲ್ಲಿ 514 ಹೆಕ್ಟೇರ್ ಪ್ರದೇಶದಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡ್ರೋನ್ ಸಮೀಕ್ಷೆಯನ್ನು ಉದ್ಘಾಟಿಸಿದರು. ಎಡಿಎಂ ಎ.ಕೆ.ರಾಮೇಂದ್ರನ್ ಸ್ವಿಚ್ ಆನ್ ಮಾಡಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಭೂಮಾಪನ ಉಪನಿರ್ದೇಶಕ ಎಸ್.ಕೆ. ಸಲೀಂ ಯೋಜನೆ ನಿರೂಪಿಸಿದರು.ಸರ್ವೇ ಅಧೀಕ್ಷಕರಾದ ಮುರಳೀಧರನ್ ಉಣ್ಣಿತ್ತಾನ್ ಎಂ.ಕೆ., ಎಂ.ಆರಿಫುದ್ದೀನ್, ವಿ.ಗುರುಪ್ರಸಾದ್, ಕೆ.ಪಿ.ಗಂಗಾಧರನ್, ಕೆ.ನರೇಶ್ ಕುಮಾರ್ ನೇತೃತ್ವ ವಹಿಸಿದ್ದರು. ಸರ್ವೆ ಸಹಾಯಕ ನಿರ್ದೇಶಕ ಸುನೀಲ್ ಜೋಸೆಫ್ ಫೆರ್ನಾಂಡಿಸ್ ಸ್ವಾಗತಿಸಿ, ಕೆ.ವಿ.ಪ್ರಸಾದ್ ವಂದಿಸಿದರು.  

                 ಡಿಜಿಟಲ್ ಸರ್ವೆ ಮಾಡಿರುವ ಮುಟ್ಟತ್ತೋಡಿ ಗ್ರಾಮದಲ್ಲಿ ಒಟ್ಟು 1210 ಹೆಕ್ಟೇರ್ ಭೂಮಿಯಲ್ಲಿ 514 ಹೆಕ್ಟೇರ್ ಪ್ರದೇಶದಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಸಮೀಕ್ಷೆ ಸಂಜೆ 6ರವರೆಗೆ ನಡೆಯಿತು.  ಹವಾಮಾನ ಅನುಕೂಲಕರವಾಗಿದ್ದರೆ ಎರಡು ದಿನಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಳ್ಳಲಿದೆ. ಉಳಿದ ಭೂಮಿಯನ್ನು ಇಟಿಎಸ್ ಕೋರ್ಸ್ ಸಿಸ್ಟಂ ಬಳಸಿ ಸರ್ವೆ ಮಾಡಲಾಗುವುದು. ಮೊದಲ ಹಂತದಲ್ಲಿ ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ 18 ಗ್ರಾಮಗಳಲ್ಲಿ ಡಿಜಿಟಲ್ ಸಮೀಕ್ಷೆ ನಡೆಸಲಾಗುವುದು.

               ಡಿಜಿಟಲ್ ಭೂ ಸಮೀಕ್ಷೆಯ ಭಾಗವಾಗಿ, ಈ ಹಿಂದೆ ಪೂರ್ಣ ಭೂ ಪ್ರದೇಶವನ್ನು ಡ್ರೋನ್ ಸಮೀಕ್ಷೆಗೆ ಸರಿಹೊಂದುವಂತೆ ಹೊಂದಿಸಲಾಗಿದೆ. ಡ್ರೋನ್ ದೃಶ್ಯವನ್ನು ಸೇರಿಸಲು ಭೂಮಿಯ ಗಡಿಗಳಲ್ಲಿ ಗಡಿರೇಖೆಯನ್ನು ಮಾಡಲಾಗಿದೆ. ಆಕಾಶದಿಂದ ಕಾಣಿಸಲು  ಅಡ್ಡಿಯಾಗುವ ಮರಗಳು ಮತ್ತು ಇತರ ವಸ್ತುಗಳನ್ನು ವಿಲೇವಾರಿಗೈದು  ಭೂಮಿಯ ಗಡಿಗಳನ್ನು ತೆರವುಗೊಳಿಸಲಾಗಿದೆ.

               ಡಿಜಿಟಲ್ ಸರ್ವೆ ದಾಖಲೆಗಳು ಬಂದ ನಂತರ ಈಗಿರುವ ಸರ್ವೆ ನಂಬರ್, ಉಪವಿಭಾಗ ಸಂಖ್ಯೆ ಹಾಗೂ ಶೀರ್ಷಿಕೆ ಸಂಖ್ಯೆ ಕಣ್ಮರೆಯಾಗಲಿದೆ. ಬದಲಿಗೆ ಭೂ ಹಿಡುವಳಿ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಅನುಗುಣವಾಗಿ ಹೊಸ ಸಂಖ್ಯೆಯನ್ನು ನೀಡಲಾಗುವುದು. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಂದಾಯ ನೋಂದಣಿ, ಪಂಚಾಯತ್ ಬ್ಯಾಂಕ್ ಮುಂತಾದ ಇಲಾಖೆಗಳ ಸೇವೆಗಳು ವಿಳಂಬವಿಲ್ಲದೆ ಲಭ್ಯವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries