ನವದೆಹಲಿ: ಹಿಜಾಬ್ ಕಾರಣಕ್ಕೆ ಹೆಣ್ಣುಮಕ್ಕಳಿಗೆ ಶಾಲೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ಭೀಕರ ಎಂದ ಪಾಕಿಸ್ತಾನದ ನೊಬೆಲ್ ಶಾಂತೆ ಪುರಸ್ಕೃತೆ ಯೂಸುಫ್ ಝೈ ಮಲಾಲಾ ಹೇಳಿದ್ದಾರೆ.
ಹಿಜಾಬ್ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಾಲೇಜುಗಳು ನಮಗೆ ಶಿಕ್ಷಣ ಮತ್ತು ಹಿಜಾಬ್ ನಡುವಿನ ಆಯ್ಕೆಯನ್ನು ಹೇರುತ್ತಿವೆ. ಹೆಣ್ಣು ಮಕ್ಕಳನ್ನು ಅವರ ಹಿಜಾಬ್ ಕಾರಣಕ್ಕಾಗಿ ಶಾಲೆಗೆ ಪ್ರವೇಶ ನೀಡದೇ ಇರುವುದು ಅತ್ಯಂತ ಭೀಕರ. ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಮಹಿಳೆಯರನ್ನು ಟೀಕಿಸುವ ಸಂಪ್ರದಾಯ ಮುಂದುವರೆದಿದೆ. ಮುಸ್ಲಿಂ ಮಹಿಳೆಯರನ್ನು ಅಲ್ಪವಾಗಿ ಕಾಣುವ ನೀತಿಯನ್ನು ಭಾರತೀಯ ನಾಯಕರು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಉದ್ಭವಗೊಂಡಿದ್ದ ಹಿಜಾಬ್ ವಿವಾದ ಈಗಾಗಲೇ ಬಹುತೇಕ ಎಲ್ಲ ಜಿಲ್ಲೆಗಳಿಗೂ ಹಬ್ಬಿದ್ದು, ಇದೇ ವಿಚಾರವಾಗಿ ನಿನ್ನೆ ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ನಡೆದಿದೆ.

