ಕುಂಬಳೆ: ಕೇರಳ ರಾಜ್ಯ ಪಿಂಚಣಿದಾರರ ಸಂಘದ 24ನೇ ರಾಜ್ಯ ಸಮ್ಮೇಳನ ಶನಿವಾರ ತ್ರಿಶ್ಶೂರು ಜಿಲ್ಲೆಯ ಶಂಕರ ಸಭಾ ಭವನದಲ್ಲಿ ನಡೆಯಿತು. ಬಿಎಂಎಸ್ ಪ್ರಾಂತ್ಯ ಅಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಸಮ್ಮೇಳನವನ್ನು ಉದ್ಘಾಟಿಸಿದರು. ಕಾಸರಗೋಡು ಜಿಲ್ಲೆಯ ಪ್ರತಿನಿಧಿಗಳಾಗಿ ಜಿಲ್ಲೆಯಿಂದ ಪ್ರಾಂತ್ಯ ಉಪಾಧ್ಯಕ್ಷ ಈಶ್ವರ ರಾವ್, ಅಧ್ಯಕ್ಷ ಶ್ರೀಧರ ಭಟ್, ಕಾರ್ಯದರ್ಶಿ ಅರವಿಂದ ಕುಮಾರ್ ಎನ್.ಕೆ., ಪ್ರಾಂತ್ಯ ಸದಸ್ಯ ಶ್ರೀಧರ ರಾವ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಸದಸ್ಯರು ಪಾಲ್ಗೊಂಡಿದ್ದರು.

.jpg)
