ಕಾಸರಗೋಡು: ಕಾಸರಗೋಡು ಜಿಲ್ಲಾ ಸಾಂಸ್ಕøತಿಕ ಸಾಹಿತ್ಯ ಸಮಿತಿ ವತಿಯಿಂದ 'ಕೆ-ರೈಲು ವೇಗವಲ್ಲ ನೋವು' ಎಂಬ ವಿಷಯದ ಕುರಿತು ಸಾಂಸ್ಕೃತಿಕ ಪ್ರತಿಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಜರುಗಿತು.
ಸಂಸ್ಕೃತಿ ಮತ್ತು ಸಾಹಿತ್ಯ ವಿಭಾಗದ ರಾಜ್ಯಾಧ್ಯಕ್ಷ ಆರ್ಯಾಡನ್ ಶೌಕತ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ವಿ.ವಿ. ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಅಧ್ಯಕ್ಷ-ಪಿ. ಕೆ.ಫೈಸಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಎಂ.ಎಸ್. ಪ್ರದೀಪ್ ಕುಮಾರ್ ಮುಖ್ಯ ಭಾಷಣ ಮಾಡಿದರು. ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ವಿನೋದ್ ಕುಮಾರ್ ಪಳ್ಳಾಯಿಲ್ ಹೌಸ್, ಎಂ. ಕುಞಂಬು ನಂಬಿಯಾರ್, ಕೆ. ಖಾಲಿದ್, ಬಾಬು ಮಣಿಯಂಗಾನ, ಶೋಭನಾ ಶ್ರೀಧರನ್, ಸಿ. ವಿ. ಜೇಮ್ಸ್ ಚಿತ್ರಕಲಾವಿದರಾದ ರವಿ ಪಿಲಿಕೋಡ್, ದಿನೇಶ ಮೂಲಕಂಡಂ, ರೋಹನ್ ಥಾಮಸ್, ಸುಕುಮಾರನ್ ಪೂಚಕ್ಕಾಡ್, ನ್ಯಾಷನಲ್ ಅಬ್ದುಲ್ಲಾ ಮತ್ತು ಅಶ್ರಫ್ ಕಿಂಡರ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ರಾಘವನ ಕುಳಂಗರ ಸ್ವಾಗತಿಸಿದರು.

