ಕಾಸರಗೋಡು: ಪಾಂಡಿಚೇರಿಯಲ್ಲಿ ಎಪ್ರಿಲ್ 18ರಿಂದ ನಡೆಯಲಿರುವ ಅಂತಾರಾಜ್ಯ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಿಗೆ ಕೇರಳ ಸೀನಿಯರ್ ಮಹಿಳಾ ತಂಡದಲ್ಲಿ ದಿವ್ಯಾ ಗಣೇಶ್ ಸ್ಥಾನ ಪಡೆದುಕೊಂಡಿ ದ್ದಾರೆ. ಕಾಞಂಗಾಡ್ ಮೂಲದ ದಿವ್ಯಾ ಗಣೇಶ್, ಕೆಸಿಎ ವಯನಾಡ್ ಕ್ರಿಕೆಟ್ ಅಕಾಡೆಮಿಯ ಮಾಜಿ ಆಟಗಾರ್ತಿ ಹಾಗೂ ಆಲ್ ರೌಂಡರ್ ಆಗಿದ್ದು, ಅಂಡರ್-19 ಮತ್ತು ಅಂಡರ್-23 ವಿಭಾಗಗಳಲ್ಲಿ ಕೇರಳ ತಂಡದಲ್ಲೂ ಆಟವಾಡಿದ್ದಾರೆ.


