ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಕುಂಡಂಕುಯಿಯಲ್ಲಿ ವಿಷಮುಕ್ತ ವಿಷುಮಾರುಕಟ್ಟೆ ಆರಂಭಿಸಲಾಗಿದೆ. ಗ್ರಾ.ಪಂ.ಅಧ್ಯಕ್ಷೆ ಎಂ.ಧನ್ಯ ವಿಷು ಸಂತೆ ಉದ್ಘಾಟಿಸಿದರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಟಿ.ವರದರಾಜ್ ಅಧ್ಯಕ್ಷತೆ ವಹಿಸಿದ್ದರು.
ವಿಷು ಮಾರುಕಟ್ಟೆಯಲ್ಲಿ ಕುಟುಂಬಶ್ರೀ ಅಧೀನದಲ್ಲಿರುವ ಎಸ್‍ಎಲ್‍ಕೆ ತಯಾರಿಕಾ ಘಟಕದಿಂದ ತಯಾರಿಸಿದ ಸಿಹಿತಿನಿಸು, ಪಪ್ಪಡ, ಉಪ್ಪಿನಕಾಯಿ, ಪಾದರಕ್ಷೆ, ಜವಳಿ ಉತ್ಪನ್ನಗಳು, ಕುಟುಂಬಶ್ರೀ ಆಶ್ರಯ ಕಾರ್ಯಕರ್ತರು ತಯಾರಿಸಿದ ವಿಷು ಪಾಟ್‍ಗಳು, ಪಾಯಸ ಮೇಳ, ಲೈವ್ ಕಿಚನ್, ಹಣ್ಣಿನ ಉತ್ಪನ್ನಗಳು ಒಳಗೊಂಡಿದೆ. ಮಾರುಕಟ್ಟೆಯು ಏಪ್ರಿಲ್ 11 ರಿಂದ 14 ರವರೆಗೆ ತೆರೆದಿರುತ್ತದೆ.
ಎಡಿಎಂಸಿ ಇಕ್ಬಾಲ್, ಡಿಪಿಸಿ ಸರ್ಕಾರದ ನಾಮನಿರ್ದೇಶಿತ ಸದಸ್ಯ ಸಿ.ರಾಮಚಂದ್ರನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಗೋಪಿ, ಪಿ.ವಸಂತ ಕುಮಾರಿ, ಸದಸ್ಯರಾದ ಕೆ.ಪ್ರಿಯಾ, ಶಾಂತಾ ಕುಮಾರಿ, ಎಂ.ತಂಬಾನ್ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಎಂ.ಗುಲಾಬಿ ಸ್ವಾಗತಿಸಿದರು. ಉಪಾಧ್ಯಕ್ಷೆ ಬಿ.ಸುನೀತಾ ವಂದಿಸಿದರು.


