ಕುಂಬಳೆ: ಮಳೆನೀರನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಪುತ್ತಿಗೆ ಅನೋಡಿಪಳ್ಳ ಜಲಸಂರಕ್ಷಣಾ ಯೋಜನೆ ಉದಾಹರಣೆಯಾಗಲಿದೆ ಎಂದು ರಾಜ್ಯ ಬಂದರು, ವಸ್ತು ಸಂಗ್ರಹಾಲಯ, ಪುರಾತತ್ವ ಸಚಿವ ಅಹ್ಮದ್ ದೇವರಕೋವಿಲ್ ಹೇಳಿದರು.
ಪುತ್ತಿಗೆ ಗ್ರಾ.ಪಂ.ನಲ್ಲಿ ಜಿಲ್ಲಾಡಳಿತ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಅನುಷ್ಠಾನಗೊಂಡ ಅನೋಡಿಪಳ್ಳ ಜಲ ಸಂರಕ್ಷಣಾ ಯೋಜನೆಗೆ ಸಚಿವರು ನಿನ್ನೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗೆ ಎಲ್ಲರೂ ಸಹಕರಿಸಬೇಕು ಎಂದ ಅವರು, ಯೋಜನೆ ನನಸಾದರೆ ಈ ಭಾಗದ ನೀರಿನ ಕೊರತೆ ನೀಗಲಿದೆ ಎಂದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ದಾಖಲೆ ವರ್ಗಾವಣೆಯನ್ನು ನಿರ್ವಹಿಸಿದರು. ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ವಿ.ಎಂ.ಅಶೋಕ್ ಕುಮಾರ್ ವರದಿ ಮಂಡಿಸಿದರು. ಎಚ್ ಎಎಲ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಮುರಳಿ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಎಚ್‍ಎಎಲ್ ಎಜಿಎಂ ಎಎಸ್ ಸಾಜಿ, ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಪುತ್ತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಕೆ ಚಂದ್ರಾವತಿ, ಪಂಚಾಯಿತಿ ಸದಸ್ಯೆ ಜಯಂತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜೇಶ್ವರಿ, ಪುತ್ತಿಗೆ ಕೃಷಿ ಅಧಿಕಾರಿ ನಫೀಸತ್ ಹಂಸೀನಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಇಬ್ರಾಹಿಂ, ಸುಲೈಮಾನ್ ಉಜಂಪಾಡಿ, ಎಂ.ಅಬ್ದುಲ್ಲಾ, ಸುನೀಲ್ ಅನಂತಪುರ, ಮನೋಹರನ್ ಮಾತನಾಡಿದರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಸ್ವಾಗತಿಸಿ, ಜಿಲ್ಲಾ ಹಣಕಾಸು ಅಧಿಕಾರಿ ಶಿವಪ್ರಕಾಶನ ನಾಯರ್ ವಂದಿಸಿದರು. .


