ಕಾಸರಗೋಡು: ಕೇರಳ ಸರ್ಕಾರದ ವನವಾಸಿ ವಿರೋಧಿ ಧೋರಣೆ ವಿರುದ್ಧ ದಿವಾಸಿ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ವನವಾಸಿ ಕೇಂದ್ರಗಳಿಗೆ ಪ್ರವೇಶ ನಿಷೇಧ ಹಿಂತೆಗೆಯಬೇಕು, ಈ ಸಮುದಾಯವನ್ನು ಇತರ ಜನರಿಂದ ಪ್ರತ್ಯೇಕಿಸಿ ವಂಶನಾಶಗೊಳಿಸುವ ಸರ್ಕಾರದ ಪ್ರಯತ್ನ ಕೈಬಿಡಬೇಕು ಮುಂತಾದ ಬೇಡಿಕೆಗಳೊಂದಿಗೆ ಧರಣಿ ಆಯೋಜಿಸಲಾಗಿತ್ತು.
ಆದಿವಾಸಿ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣನ್ ಮಾಸ್ತರ್ ಧರಣಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಪುತ್ತಿಗೆ ವಿಭಾಗದ ಸದಸ್ಯ ನಾರಾಯಣ ನಾಯ್ಕ್ ಸಮಾರಂಭ ಉದ್ಘಾಟಿಸಿದರು. ಆದಿವಾಸಿ ಹಕ್ಕುಗಳ ರಕ್ಷಣಾ ಸಮಿತಿ ಕಣ್ಣೂರು ವಿಭಾಗ ಸಂಯೋಜಕ ಶಿಬು ಪಾಣತ್ತೂರು ಮುಖ್ಯ ಭಾಷಣ ಮಾಡಿದರು. ಉಮಾನಾಥ್ ಮಂಜೇಶ್ವರಂ, ಶಶೀಂದ್ರ ಮಂಜೇಶ್ವರಂ, ಸಿ.ಚಂದ್ರನ್ ಕುಟ್ಟಿಕೋಲ್, ಸುಂದರನ್ ತುಂಪೆÇೀಡಿ, ಮೋಹನ್ ಚೈಯೋತ್, ಬಾಲನ್ ಮಾವುಂಗಲ್ ಉಪಸ್ಥಿತರಿದ್ದರು. ಆದಿವಾಸಿ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಸಿ.ಪಿ.ರಾಮನ್ ಕುಟ್ಟಿಕೋಲ್ ಸ್ವಾಗತಿಸಿದರು. ಶೈಜು ಎಂ.ಡಿ. ವಂದಿಸಿದರು.

