ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಹಾರ ವಿಷದ ಏರಿಕೆಯಲ್ಲಿ ಆರೋಗ್ಯ ಜಾಗೃತಿ - 2022 ರ ಅಂಗವಾಗಿ ಅಂಗನವಾಡಿ ಸಹಾಯಕಿಯರಿಗೆ ಜಾಗೃತಿ ತರಬೇತಿ ತರಗತಿಯನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಹಾಗೂ ಆರೋಗ್ಯ ನಿರೀಕ್ಷಕ ಜಿ.ಸುನೀಲ್ ಅವರು ವೈಯಕ್ತಿಕ ಸ್ವಚ್ಛತೆ, ಆಹಾರ ಸ್ವಚ್ಛತೆ, ಕುಡಿಯುವ ನೀರಿನ ಸ್ವಚ್ಛತೆ ಹಾಗೂ ಪರಿಸರ ಸ್ವಚ್ಛತೆ ಕುರಿತು ತರಗತಿ ನಡೆಸಿದರು. ಕಿರಿಯ ಆರೋಗ್ಯ ನಿರೀಕ್ಷಕ ಜಿಜು ಸ್ವಾಗತಿಸಿ, ಬೈಜು ಎಸ್ ರಾಮ್ ವಂದಿಸಿದರು.

-ANGANWADI%20HELPERS%20CLASS.jpg)
