ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಕ್ಷೇತ್ರದ ಜೀರ್ಣೋದ್ದಾರ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು ಉಪ ದೇವತೆಗಳ ಬಾಲಾಲಯ ಪ್ರತಿಷ್ಠೆ ಇಂದು ಸಂಜೆಯಿಂದ ನಾಳೆ ಬೆಳಿಗ್ಗಿನ ವರೆಗೆ ವಿವಿಧ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಕ್ಷೇತ್ರದ ತಂತ್ರಿವರ್ಯ ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ಇಂದು ಸಂಜೆ ಆರಂಭಗೊಳ್ಳಲಿದೆ. ನಾಳೆ ಬೆಳಿಗ್ಗೆ 8.55 ರಿಂದ 9.38 ರ ಶುಭ ಮುಹೂರ್ತದಲ್ಲಿ ಉಪ ದೇವತೆಗಳ ಬಾಲಾಲಯ ಪ್ರತಿಷ್ಠೆ ಸಂಪನ್ನಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




