ಕುಂಬಳೆ: ಯಕ್ಷಕವಿ ಪಾರ್ತಿಸುಬ್ಬನ ನೆಲದಲ್ಲಿ ಯಕ್ಷಗಾನ ಕಲಾರಾಧನೆಯಲ್ಲಿ ಅತ್ಯಂತ ಶ್ರದ್ಧೆಯಿಂದ ಕಾರ್ಯವೆಸಗುತ್ತಾ ಭಾರತೀಯ ಜನತಾ ಪಕ್ಷದ ಇಂದೀಗ ವಿಶಾಲ ವೃಕ್ಷವಾಗಿ ಬೆಳೆದು ನಿಂತಿರುವ ಪಕ್ಷವನ್ನು ಕುಂಬಳೆಯಲ್ಲಿ ಬಿತ್ತಿ ಬೆಳೆದು ನೀರೆರೆದು ಪೆÇೀಷಿಸಿದ ಅನನ್ಯ ಸಾಧಕ ಮಾಧವ ರಾವ್ ಕುಂಬಳೆ ಎಂದು ಭಾರತೀಯ ಜನತಾ ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ತಿಳಿಸಿದರು.
ಕುಂಬಳೆ ಮಾಧವ ರಾವ್ ಪುಣ್ಯತಿಥಿ ದಿನ ಕುಂಬಳೆ ಭಾಜಪ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಮರಣ ಭಾಷಣ ಮಾಡಿ ಅವರು ಮಾತನಾಡಿದರು.
ಕುಂಬಳೆಯಲ್ಲಿ ಭಾರತೀಯ ಜನತಾ ಪಕ್ಷ ಇನ್ನೂ ಹುಟ್ಟಿರದ ಕಾಲದಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಈ ಪಕ್ಷದ ಅಗತ್ಯತೆ, ಅದನ್ನು ಬಿತ್ತಿ ಬೆಳೆಸಬೇಕೆಂಬ ಕಠಿಣ ನಿರ್ಧಾರವನ್ನು ತಾಳಿ ಅದನ್ನು ದೊಡ್ಡ ಸಂಘಟನೆಯಾಗಿ ಬೆಳೆಸುವಲ್ಲಿ ಮಾಧವ ರಾವ್ ಕುಂಬಳೆ ವಹಿಸಿದ ಶ್ರಮ ಮಹತ್ತರವಾದುದು. ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಭಾರತೀಯ ಜನತಾಪಕ್ಷದ ಮೊದಲ ಸದಸ್ಯರಾಗಿ ಆಯ್ಕೆಯಾದ ಅವರ ತಾಳ್ಮೆ, ಸಂಘಟನಾ ಚಾತುರ್ಯವೇ ಮೊದಲಾದುವು ಇಂದಿನ ಪೀಳಿಗೆಗೆ ಮಾದರಿ ಎಂದು ಅವರು ಈ ಸಂದರ್ಭ ನೆನಪಿಸಿದರು.
ಬಿಜೆಪಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಮಂಡಲ ನೇತಾರರಾದ ರಮೇಶ್ ಭಟ್, ಸುಧಾಕರ ಕಾಮತ್, ಸುಬ್ರಹ್ಮಣ್ಯ ನಾಯಕ್, ಜನಪ್ರತಿನಿಧಿಗಳಾದ ವಿದ್ಯಾ ಪೈ, ಪ್ರೇಮಾವತಿ, ಸುಲೋಚನ, ಮೋಹನ್ಕುಮಾರ್, ಅಜಯ್ ನಾಯ್ಕಾಪು ಉಪಸ್ಥಿತರಿದ್ದರು. ವಿವೇಕಾನಂದ ಶೆಟ್ಟಿ ಸ್ವಾಗತಿಸಿ ಪುಷ್ಪಾವತಿ ವಂದಿಸಿದರು. ಅರುಣ್ ಕುಮಾರ್ ನಿರ್ವಹಿಸಿದರು.

.jpeg)
