ಕಾಸರಗೋಡು: ಜಗದೋದ್ಧಾರಕ ಶ್ರೀ ಕೃಷ್ಣನ ಸಂದೇಶ ಸಾರ್ವಕಾಲಿಕವಾದುದು. ವಿಶ್ವದೆಲ್ಲೆಡೆ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ. ಕೃಷ್ಣನ ಪ್ರತಿಯೊಂದು ಬಾಲ ಲೀಲೆಗಳು, ಪವಾಡಗಳು ಎಲ್ಲವೂ ಅವಿಸ್ಮರಣೀಯವಾದುದು. ಕೃಷ್ಣ ನೀಡಿರುವ ಪ್ರತಿಯೊಂದು ಸಂದೇಶ ಮನೆ ಮನೆಯಲ್ಲೂ ಪಾಲಿಸುವಂತಾಗಬೇಕು. ಈ ಮೂಲಕ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ 20 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗು 11 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮವನ್ನು ಗುರುವಾರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ ಸಮಿತಿ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀನಿವಾಸ್ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಮೂಲಕ ಭಾರತೀಯ ಸಂಸ್ಕøತಿಯನ್ನು ಮಕ್ಕಳಲ್ಲಿ ರೂಢಿಸಿಕೊಳ್ಳುವ ಕಾರ್ಯ ಶ್ಲಾಘನೀಯವಾದುದು ಎಂದರು. ಶ್ರೀ ರಾಮನಾಥ ದೇವಸ್ಥಾನದ ಕಾರ್ಯದರ್ಶಿ ಹರೀಶ್ಚಂದ್ರ ಸೂರ್ಲು ಉಪಸ್ಥಿತರಿದ್ದರು.
ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾವ್ಯ ಕುಶಲ ಮತ್ತು ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣೇಶ್ವರೀ ಭಜನಾ ಸಂಘ ಕೋಟೆಕಣಿ ಮತ್ತು ಶ್ರೀಹರಿ ಮಹಿಳಾ ಭಜನಾ ಸಂಘ ಮೀಪುಗುರಿ ಅವರಿಂದ ಭಜನಾ ಸಂಕೀರ್ತನೆ ನಡೆಯಿತು.
ಮನೆಮನೆಯಲ್ಲಿ ಕೃಷ್ಣ ಸಂದೇಶ ಪಾಲಿಸಬೇಕು : ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ : ಕೋಟೆಕಣಿಯಲ್ಲಿ 20ನೇ ವರ್ಷದ ಜನ್ಮಾಷ್ಟಮಿ ಆಚರಣೆಗೆ ಚಾಲನೆ
0
ಆಗಸ್ಟ್ 19, 2022

.jpg)
