ಕಾಸರಗೋಡು: ಕೋಡೋಂ ಬೆಳ್ಳೂರು ಗ್ರಾಮ ಪಂಚಾಯಿತಿ ವತಿಯಿಂದ 19ನೇ ವಾರ್ಡಿನ ಆನೆÀಕಲ್ಲು- ಚೆಮಂತೋಡ್ ಕಾಂಕ್ರಿಟ್ ರಸ್ತೆ ಹಾಗೂ ಓವುಚ್ಚಾಲ ಕಾಂಕ್ರೀಟ ರಸ್ತೆಯ ಉದ್ಘಾಟನೆ ನಡೆಯಿತು. ಪಂಚಾಯಿತಿ ಉಪಾಧ್ಯಕ್ಷ ಪಿ.ದಾಮೋದರನ್ ಉದ್ಘಾಟಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಗೋವಿಂದನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತ್ರಿ ಸಹಾಯಕ ಅಭಿಯಂತರ ಕೆ. ಬಿಜು ಯೋಜನೆ ಬಗ್ಗೆ ವಿವರಿಸಿದರು. ಪಿ.ನಾರಾಯಣನ್, ವಿ.ಕೆ.ಕೃಷ್ಣನ್, ಪಿ.ಕೃಷ್ಣನ್ ಮತ್ತು ಕೆ.ಪಿ.ರಾಘವನ್ ಮಾತನಾಡಿದರು. ಸಿ.ಪಿ.ಸವಿತಾ ಸ್ವಾಗತಿಸಿ, ಗೋಪಾಲನ್ ವಂದಿಸಿದರು.
ಆನೆಕಲ್ಲು- ಚೆಮಂತೋಡ್ ಕಾಂಕ್ರೀಟ್ ರಸ್ತೆ ಉದ್ಘಾಟನೆ
0
ಆಗಸ್ಟ್ 21, 2022

.jpeg)
