ಕುಂಬಳೆ: ಇಲಿಜ್ವರ, ರೇಬಿಸ್ ನಿಂದಾಗುವ ಸಾವುಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸಲು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ(ಸಿ.ಎಚ್.ಸಿ) ನಿರ್ಮಿಸಿರುವ ‘ಲೆಪೆÇ್ಟೀ’ ಕಿರುಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಕೆ. ದಿವಾಕರÀ ರೈ ಅಧ್ಯಕ್ಷತೆ ವಹಿಸಿದ್ದರು.
ಇಲಿ ಜ್ವರ ಬಾಧಿಸಿ ಮೃತರಾಗಲು ಕಾರಣವಾಗುವ ಕೆಸರು ಮತ್ತು ಹಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕನ ಕಥೆಯನ್ನು ಚಿತ್ರ ನಿರೂಪಿಸುತ್ತದೆ. ರೋಗವನ್ನು ಮೊದಲೇ ಪತ್ತೆ ಹಚ್ಚದೆ, ಕಾಯಿಲೆ ಗಂಭೀರವಾದಾಗ ಆಸ್ಪತ್ರೆಗೂ ತಲುಪದೆ ಸ್ವ ಚಿಕಿತ್ಸೆ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಮತ್ತು ನಿರ್ಲಕ್ಷ್ಯದಿಂದ ಜೀವಹಾನಿಯಾಗುವ ಗಂಭೀರತೆಯನ್ನು ಕಿರುಚಿತ್ರ ಸಮರ್ಥವಾಗಿ ವಿವರಿಸುತ್ತದೆ.
ರೋಗಲಕ್ಷಣಗಳು ಕಾಣಿಸಿಕೊಂಡ ಸಂದರ್ಭ ರೋಗವನ್ನು ಪತ್ತೆ ಮಾಡಿದರೆ, ಅದನ್ನು 100 ಶೇ. ರಷ್ಟು ಚಿಕಿತ್ಸೆ ನೀಡಿ ಗುಣಪಡಿಸಬಹುದು. ತಡೆಗಟ್ಟುವಿಕೆಗಾಗಿ 6 ವಾರಗಳವರೆಗೆ ವಾರಕ್ಕೊಮ್ಮೆ 200 ಮಿಗ್ರಾಂ ಡಾಕ್ಸಿ ಮಾತ್ರೆಗಳನ್ನು ಕೆಸರು ಮತ್ತು ಲಾಯದಲ್ಲಿ ಕೆಲಸ ಮಾಡುವವರು ತೆಗೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆಗಳು ಉಚಿತವಾಗಿ ದೊರೆಯುತ್ತವೆ ಎಂದು ಚಿತ್ರದ ಕೊನೆಗೆ ಸಂದೇಶ ನೀಡಲಾಗಿದೆ.
ಕುಂಬಳೆ ಸಿಎಚ್ ಸಿಯ ನೌಕರರು ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅವರ ಕಲ್ಪನೆಯಲ್ಲಿ ಚಿತ ಮೂಡಿಬಂದಿದೆ. ಜೋಜಿ ಟಿ.ಜಾರ್ಜ್ ಅವರ ನಿರ್ದೇಶನದಲ್ಲಿ, ಹಿರಿಯ ನರ್ಸಿಂಗ್ ಅಧಿಕಾರಿ ಬಿಂದು ಜೋಜಿ ಕಥೆ ಮತ್ತು ಚಿತ್ರಕಥೆಯನ್ನು ನಿಭಾಯಿಸಿದ್ದಾರೆ. ಫಾರೂಕ್ ಶಿರಿಯಾ ಕ್ಯಾಮೆರಾ ಮತ್ತು ಸಂಕಲನವನ್ನು ನಿರ್ವಹಿಸಿದ್ದಾರೆ. ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಸಿಸಿ ಬಾಲಚಂದ್ರನ್ ನಿರ್ಮಾಣ ನಿಯಂತ್ರಣವನ್ನು ನಿರ್ವಹಿಸಿದ್ದಾರೆ. 5 ನಿಮಿಷಗಳ ಕಿರುಚಿತ್ರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
ಕಿರುಚಿತ್ರ ಬಿಡುಗಡೆ ಸಂದರ್ಭ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಬಿ.ಸಿ.ಕುಮಾರನ್, ಜೋಜಿ ಟಿ.ಜಾರ್ಜ್, ಮಸೂದ್ ಬೋವಿಕ್ಕಾನ, ಬಿಂದು ಜೋಜಿ, ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್ ಮಾತನಾಡಿದರು.
ಕುಂಬಳೆ ಸಿಎಚ್ ಸಿಯಲ್ಲಿ ರೇಬಿಸ್ ಜಾಗೃತಿ ಕಿರುಚಿತ್ರ ಪ್ರದರ್ಶನ
0
ಆಗಸ್ಟ್ 21, 2022

-lepto%20short%20film.jpg)
