ಕಾಸರಗೋಡು: ಕೇರಳ ಪೋಲೀಸರ ಹೋಪ್ ಯೋಜನೆಯು ವಿವಿಧ ಕಾರಣಗಳಿಂದಾಗಿ ಶಾಲೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿದ ಮಕ್ಕಳಿಗೆ ಸಹಾಯ ಮಾಡುವ ನವೀನ ಯೋಜನೆಯಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಸಾಮಥ್ರ್ಯವನ್ನು ನೀಡಿ ಸಮಾಜದಲ್ಲಿ ಮುಂದಕ್ಕೆ ತರುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ 2019 ರಿಂದ ಈ ಯೋಜನೆಯು ಜಾರಿಯಲ್ಲಿದೆ. ಜಿಲ್ಲೆಯ ಹಲವಾರು ಮಕ್ಕಳಿಗೆ ಈ ಯೋಜನೆಯ ಮುಖಾಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಿದೆ.
ಕಾಸರಗೋಡು ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹೋಪ್ ಲರ್ನಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಲ್ಲಿ 28 ವಿದ್ಯಾರ್ಥಿಗಳು 10ನೇ ತರಗತಿ ಮತ್ತು ಪ್ಲಸ್ ಟು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ 10 ನೇ ತರಗತಿ ಹಾಗೂ ಪ್ಲಸ್ ಟು ಸೇರಿ ಒಟ್ಟು 29 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. 10 ನೇ ತರಗತಿ ಪರೀಕ್ಷೆ ಬರೆದ 11 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ, ವಿವಿಧ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳನ್ನು ಬಳಸಿಕೊಂಡು ಬೋಧನೆ ಮತ್ತು ಕಲಿಕೆಯ ಅವಧಿಗಳನ್ನು ನಡೆಸಲಾಯಿತು.
ಕರಾವಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿದ (ಡ್ರಾಪ್ಔಟ್) ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಕೋ-ಆರ್ಡಿನೇಟರ್‍ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಇಂತಹ ವಿದ್ಯಾರ್ಥಿಗಳನ್ನು (ಡ್ರಾಪ್ಔಟ್‍ಗಳನ್ನು) ಕಂಡು ಹಿಡಿದು ವಿಧ್ಯಾಭ್ಯಾಸದ ಮೌಲ್ಯವನ್ನು ತಿಳಿಸಿ ಮೊಟಕುಗೊಂಡ ವಿಧ್ಯಾಭ್ಯಾಸವನ್ನು ಮುಂದುವರಿಸಲು ಹೋಪ್ ಮುಖಾಂತರ ಸಹಾಯ ಮಾಡುತ್ತಾರೆ. ಜಿಲ್ಲೆಯ ಅಡಿಷನಲ್ ಸುಪರಿಡೆಂಟ್ ಆಫ್ ಪೋಲೀಸ್ ಹೋಪ್ ನ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಪ್‍ನ ಕೆಲಸವಕಾಯ9ಗಳನ್ನು ಸಂಘಟಿಸಲು ಹೋಪ್ ನಿರ್ವಾಹಕರು ಇದ್ದಾರೆ. ಎನ್ ಐ ಒ ಎಸ್ (ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್), ಕೇರಳ ಪಠ್ಯಕ್ರಮವನ್ನು ಇಲ್ಲಿ ಅನುಸರಿಸಲಾಗುತ್ತದೆ. 14 ವರ್ಷ ಪೂರೈಸಿದ ಮತ್ತು ಮಲಯಾಳ ಓದಲು ಮತ್ತು ಬರೆಯಲು ತಿಳಿದಿರುವ ಯಾರಿಗೂ ಎನ್ ಐ ಒ ಎಸ್ ಮೂಲಕ ಎಸ್ ಎಸ್ ಎಲ್ ಸಿ, ಹಾಗೂ 15 ವರ್ಷ ಪೂರ್ಣಗೊಳಿಸಿದ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ಲಸ್ ಟುವ ನ್ನು ಹೋಪ್ ಯೋಜನೆಯ ಮುಖಾಂತರ ಮಾಡಬಹುದು. ಈ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಹ್ಯುಮಾನಿಟಿಸ್ ( ಮಾನವಿಕ ಶಾಸ್ತ್ರ) ಮತ್ತು ಕಾಮರ್ಸ್ (ವಾಣಿಜ್ಯ ಶಾಸ್ತ್ರ)ನ್ನು ಕಲಿಸಲಾಗುತ್ತದೆ.
ವಿಧ್ಯಾಭ್ಯಾಸನ್ನು ಅರ್ಧದಲ್ಲಿ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವಾಗಿ ಕೇರಳ ಪೋಲೀಸ್
0
ಆಗಸ್ಟ್ 21, 2022

-KERALA%20POLICE%20HOPE.jpg)
