ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆ ವತಿಯಿಂದ ಗಾಂಧಿ ಜಯಂತಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಅ. 2ರಂದು ಗಾಂಧಿ ಜಯಂತಿಯ ಸಂದೇಶವನ್ನು ಹೊತ್ತು ಕಾಞಂಗಾಡ್ ಮಾಂತೋಪ್ ಮೈದಾನದಿಂದ ಮಡಿಯನ್ ಜಂಕ್ಷನ್ ಮೂಲಕ ವೆಲ್ಲಿಕೋತ್ ಮಹಾಕವಿ ಪಿ ಸ್ಮಾರಕ ವಿದ್ಯಾಲಯದವರೆಗೆ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ಸೈಕಲ್ ರ್ಯಾಲಿಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮತ್ತಿತರರು ಭಾಗವಹಿಸಲಿದ್ದಾರೆ.
ಮಾದಕ ಮುಕ್ತ ಕೇರಳ ಅಭಿಯಾನ:
ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿ ನೇತೃತ್ವದಲ್ಲಿ ಮಾದಕ ಮುಕ್ತ ಕೇರಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 3 ರಂದು "ವ್ಯಸನದ ವಿರುದ್ಧ ಕಲೆಕ್ಟರೇಟ್‍ನಲ್ಲಿ ಕೈಜೋಡಿಸೋಣ" ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ಬರಹ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. 3ರಂದು ಬೆಳಗ್ಗೆ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಚ್.ದಿನೇಶನ್ ಉದ್ಘಾಟಿಸುವರು.
ಜಿಲ್ಲಾ ವಾರ್ತಾ ಇಲಾಖೆ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
0
ಸೆಪ್ಟೆಂಬರ್ 28, 2022

