ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಮಂಜೇಶ್ವರ ಉಪಜಿಲ್ಲೆಯ ವತಿಯಿಂದ ಕೆ.ಟೆಟ್ ಪರೀಕ್ಷೆಯ ತರಬೇತಿ ಕಾರ್ಯಕ್ರಮ ಎಸ್.ಎಸ್.ಬಿ.ಎ. ಯು.ಪಿ.ಎಸ್ ಐಲ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ.ಕೆ.ಆರ್ ವಹಿಸಿದ್ದರು. ಕಾರ್ಯಕ್ರಮವನ್ನು ಎನ್.ಟಿ.ಯು ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎನ್.ಟಿ.ಯು ರಾಜ್ಯ ಸಮಿತಿ ಸದಸ್ಯ ಮಹಾಬಲ ಭಟ್, ಮನಃಶಾಸ್ತ್ರದ ಉಪನ್ಯಾಸಕ ಡಾ.ಸುಧೀರ್, ಎನ್.ಟಿ.ಯು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಶುಭ ಹಾರೈಸಿದರು.
ಎನ್.ಟಿಯು ಮಂಜೇಶ್ವರ ಉಪಜಿಲ್ಲಾ ಸದಸ್ಯ ಹರಿದಾಸ್ ವಂದಿಸಿದರು. ಸದಸ್ಯ ನಿಷಿತ್ ನಿರೂಪಿಸಿದರು.
ಎನ್.ಟಿ.ಯುವಿನಿಂದ ಕೆ.ಟೆಟ್ ತರಬೇತಿ
0
ಅಕ್ಟೋಬರ್ 10, 2022

.jpg)
