ಕುಂಬಳೆ: ವಿಶ್ವಹಿಂದೂ ಪರಿಷತ್ ಕುಂಬಳೆ ಪಂಚಾಯಿತಿ ಖಂಡ ಸಮಿತಿಯ ನೇತೃತ್ವದಲ್ಲಿ ಗೋಪೂಜೆ ನಡೆಸಲಾಯಿತು. ನಾರಾಯಣಮಂಗಲ ರಾಜನ್ ಅವರ ನಿವಾಸದಲ್ಲಿ ಜರಗಿದ ಗೋಪೂಜೆ ಕಾರ್ಯಕ್ರಮಕ್ಕೆ ಖಂಡ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಾಸ್ತರ್ ನೇತೃತ್ವ ನೀಡಿದ್ದರು. ರವಿಶಂಕರ ಮಾಸ್ತರ್ ನೆಗಳಗುಳಿ ಗೋವಿನ ಮಹತ್ವದ ಕುರಿತು ವಿವರಿಸಿದರು. ಈಶ್ವರ ಭಟ್ ಗೋಪೂಜೆ ನಡೆಸಿದರು. ಗ್ರಾಮಪಂಚಾಯಿತಿ ಸದಸ್ಯೆ ಸುಲೋಚನ ಶುಭಹಾರೈಸಿದರು. ಕುಂಬಳೆ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಮುರಳೀಧರ ಯಾದವ್ ಸ್ವಾಗತಿಸಿ, ರಜತ್ ನಾರಾಯಣಮಂಗಲ ವಂದಿಸಿದರು.
ವಿಹಿಂಪ ಕುಂಬಳೆ ಖಂಡ ಸಮಿತಿಯ ನೇತೃತ್ವದಲ್ಲಿ ಗೋಪೂಜೆ
0
ಅಕ್ಟೋಬರ್ 28, 2022
Tags

.jpg)
