ಕಾಸರಗೋಡು:ದೃಶ್ಯಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಲು ಕೇರಳ ಲಲಿತ ಕಲಾ ಅಕಾಡೆಮಿ ಆಯೋಜಿಸಿರುವ ಏಕವ್ಯಕ್ತಿ ಪ್ರದರ್ಶನ ಮತ್ತು ಸಮೂಹ ಪ್ರದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಕವ್ಯಕ್ತಿ / ಇಬ್ಬರು ವ್ಯಕ್ತಿಗಳ ಕಲಾ ಪ್ರದರ್ಶನಕ್ಕೆ 50,000 ಮತ್ತು ಮೂರರಿಂದ ಐದು ಜನರ ಗುಂಪಿಗೆ 1 ಲಕ್ಷ ರೂಪಾಯಿ ನೀಡಲಾಗುವುದು. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ (ಮುದ್ರಣ ತಯಾರಿಕೆ), ನ್ಯೂಮೀಡಿಯಾ ಮತ್ತು ಛಾಯಾಗ್ರಹಣ ಎಂಬೀ ವಿಭಾಗಗಳಲ್ಲಿ ಪ್ರದರ್ಶನಕ್ಕಿರುವ ಧನ ಸಹಾಯವನ್ನು ನೀಡಲಾಗುತ್ತದೆ. ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳು ಅಕಾಡೆಮಿಯ ವೆಬ್‌ಸೈಟ್‌ನಲ್ಲಿರುವ ಆನ್‌ಲೈನ್ ಲಿಂಕ್ ಮೂಲಕ (www.lalithkala.org ) ತಮ್ಮ ಸ್ವಂತ ಕೃತಿಗಳ 8*6 ಇಂಚು ಗಾತ್ರ ವಿರುವ 10 ಕಲಾಕೃತಿಗಳ ಬಣ್ಣದ ಭಾವಚಿತ್ರಗಳು ( ಕಲರ್ ಫೋಟೋ ಗಳು) ಮತ್ತು ಸಂಕ್ಷಿಪ್ತ ಜೀವನಚರಿತ್ರೆಯ ಟಿಪ್ಪಣಿಯೊಂದಿಗೆ ಅರ್ಜಿ ಸಲ್ಲಿಸಬೇಕು. ವರ್ಷದಲ್ಲಿ ಅನುದಾನಕ್ಕೆ ಆಯ್ಕೆಯಾದ ಆರು ತಿಂಗಳೊಳಗೆ ಆ ಆರ್ಥಿಕ ವರ್ಷ ದಲ್ಲಿಯೇ ಅಕಾಡೆಮಿಯ ಯಾವುದಾದರೂ ಗ್ಯಾಲರಿಗಳಲ್ಲಿ ಪ್ರದರ್ಶನವನ್ನು ನಡೆಸಬೇಕು. ಕೇರಳದ ಒಳಗೆ ಮತ್ತು ಹೊರಗೆ ನೆಲೆಸಿರುವ ಮಲಯಾಳಿಗಳು ಪ್ರದರ್ಶನಕ್ಕೆ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 2017 ರ ನಂತರ ಏಕವ್ಯಕ್ತಿ ಪ್ರದರ್ಶನಕ್ಕೆ ಅನುದಾನ ಪಡೆದವರು ಅರ್ಜಿ ಸಲ್ಲಿಸಬೇಕಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್‌ಗೆ ಭೇಟಿ ನೀಡಿ (www.lalithkala.org).

