ಕಾಸರಗೋಡು: ಭಾಷೆ ಹೋರಾಟದ ಅಸ್ತ್ರವಾಗಿದ್ದು, ಇದು ಮಾನವನ ಸಮನ್ವಯತೆಗೆ ಅತ್ಯಗತ್ಯ. ಭವಿಷ್ಯದಲ್ಲಿ ಭಾಷೆ ಮತ್ತು ಸಂಸ್ಕøತಿಯ ವೈವಿಧ್ಯತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ಕೆ.ವಿ. ಕುಞÂರಾಮನ್ ತಿಳಿಸಿದ್ದಾರೆ.
ನಾಟ್ಯ ರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮಲಯಾಳ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಭಾಷಾಂತರ ಕಾರ್ಯಾಗಾರದ ಎರಡನೇ ದಿನ ಕಥಕ್ಕಳಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಥಕ್ಕಳಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಎಂ.ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಸತೀಶನ್ ನಂಬಿಯಾರ್, ಸುಜಾತಾ ಎಸ್., ಡಾ. ಲಿಜಿ.ಎನ್ ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಗೋಷ್ಠಿಗಳಲ್ಲಿ ಡಾ.ರಾಜೇಶ ಬೆಜ್ಜಂಗಳ, ಡಾ. ಹರಿಕೃಷ್ಣ ಭರಣ್ಯ, ವಿಕ್ರಂ ಕಾಂತಿಕೆರೆ ಮತ್ತು ನರಸಿಂಗರಾವ್ ಕಾಸರಗೋಡು ವಿಷಯ ಮಂಡಿಸಿದರು. ಕೋಟಯ್ಕಲ್ ಸಿ.ಎ.ಉಣ್ಣಿಕೃಷ್ಣನ್ ಮತ್ತು ಡಾ.ವಿ.ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ಕಥಕ್ಕಳಿ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದ ಸಂಯೋಜಕ ಡಾ. ಬಾಲಕೃಷ್ಣ ಬಿ. ಎಂ. ಹೊಸಂಗಡಿ ವಂದಿಸಿದರು.
ಭಾಷೆ ಎಂಬುದು ಹೋರಾಟದ ಪ್ರಮುಖ ಅಸ್ತ್ರ: ಮಾಜಿ ಶಾಸಕ ಕೆ.ವಿ ಕುಞರಾಮನ್
0
ಅಕ್ಟೋಬರ್ 15, 2022
Tags


