ಬದಿಯಡ್ಕ: ಎಡನೀರು ಮಠದಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇವರ ನೇತೃತ್ವದಲ್ಲಿ ಕನ್ನಡ ಸಂಸ್ಕøತಿ ಇಲಾಖೆ ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಎಡನೀರು ಮಠದಲ್ಲಿ ಜರಗಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಅನುಗ್ರಹಿಸಿದರು. ಪ್ರಸಿದ್ಧ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಈಶ್ವರ ಭಟ್, ಶಾರದಾ, ಸರಸ್ವತಿ, ಪ್ರೇಮಾ, ವೆಂಕಟ ಭಟ್ ಎಡನೀರು, ಮತ್ತಿತರರು ಉಪಸ್ಥಿತರಿದ್ದರು. ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪುಮೂಲೆ ನೇತೃತ್ವ ವಹಿಸಿದ್ದರು.
ಎಡನೀರಿನಲ್ಲಿ ಕೋಟಿಕಂಠ ಗಾಯನ
0
ಅಕ್ಟೋಬರ್ 28, 2022
Tags

.jpg)
