ಬದಿಯಡ್ಕ: ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 2021-22 ನೇ ಶೈಕ್ಷಣಿಕ ವರ್ಷದ ಎಲ್. ಎಸ್. ಎಸ್.ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿ ಅರ್ಹತೆ ಪಡೆದ ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಚಿನ್ಮಯಕೃಷ್ಣ. ಎಂ.,ಲಾವಣ್ಯ .ಬಿ. ಮತ್ತು ಮಲಯಾಳ ವಿಭಾಗದ ನಿತಿನ್ ರಾಜ್.ಎ. ಮತ್ತು ಅನವದ್ಯ ಬಿ.ಆರ್.
ಇವರಲ್ಲಿ ಚಿನ್ಮಯಕೃಷ್ಣ 85 ಶೇಕಡಾ ಅಂಕಗಳೊಂದಿಗೆ ಕುಂಬಳೆ ಉಪಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವನು. ಇವರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ನಾಲ್ವರಿಗೆ ಎಲ್.ಎಸ್.ಎಸ್ ಸ್ಕಾಲರ್ ಶಿಫ್
0
ಅಕ್ಟೋಬರ್ 28, 2022
Tags


