ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಕುಂಕುಮಾರ್ಚನೆ ನಡೆಯಿತು. ಶ್ರೀ ದುರ್ಗಾಶಕ್ತಿ ಮಾತೃ ಮಂಡಳಿ ಕುಮಾರಮಂಗಲ ಬೇಳ ಇದರ ವತಿಯಿಂದ ವೇ. ಮೂ. ಶಂಕರನಾರಾಯಣ ಶರ್ಮ ನಿಡುಗಳ ಇವರ ಪೌರೋಹಿತ್ಯಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷೆಯಾಗಿ ನಿವೃತ್ತ ಅಧ್ಯಾಪಿಕೆ ಸರಸ್ವತಿ ಬೇಳ, ಅಧ್ಯಕ್ಷೆಯಾಗಿ ಭಾರ್ಗವಿ ಏಣಿಯರ್ಪು, ಉಪಾಧ್ಯಕ್ಷೆಯಾಗಿ ಜಯಲಕ್ಷ್ಮೀ ಕುಮಾರಮಂಗಲ, ಕಾರ್ಯದರ್ಶಿಯಾಗಿ ಭಾರತಿ ಆರ್ ಶೆಟ್ಟಿ ವಿಷ್ಣುಮೂರ್ತಿ ನಗರ, ಜೊತೆಕಾರ್ಯದರ್ಶಿಗಳಾಗಿ ಅನ್ನಪೂರ್ಣ ಕಡಂಬಳ ಮತ್ತು ಕರಿಷ್ಮಾ ಕೋಡಿಂಗಾರು, ಖಚಾಂಜಿಯಾಗಿ ರತ್ನಾವತಿ ಕುಮಾರಮಂಗಲ ಮತ್ತು ಸದಸ್ಯರಾಗಿ 35 ಜನರನ್ನು ಆಯ್ಕೆ ಮಾಡಲಾಯಿತು. ರತ್ನಾವತಿ ಕುಮಾರಮಂಗಲ ವಂದಿಸಿದರು.
ಶ್ರೀದುರ್ಗಾಶಕ್ತಿ ಮಾತೃಮಂಡಳಿ ವತಿಯಿಂದ ಕುಂಕುಮಾರ್ಚನೆ, ನೂತನ ಸಮಿತಿ ರಚನೆ
0
ಅಕ್ಟೋಬರ್ 16, 2022

.jpg)
