ಬದಿಯಡ್ಕ: ಚೈಲ್ಡ್ ಲೈನ್ ಕಾಸರಗೋಡು ಆಶ್ರಯದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿಯ 14 ನೆ ವಾರ್ಡ ಪಟ್ಟಾಜೆಯ ಕಿಡ್ಸ್ ಗೇಮ್ ಆಟೋಟ ಸ್ಪರ್ಧೆ ಪೆರಡಾಲ ಕ್ಷೇತ್ರದ ಗದ್ದೆಯಲ್ಲಿ ಜರಗಿತು. ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟರಮಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಆಡಳಿತ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕಾಸರಗೋಡು ಜಿಲ್ಲಾ ಬ್ಯಾಂಕಿನ ಮಾಜಿ ಪ್ರಬಂಧಕ ಕುಂಞಣ್ಣ ಶುಭ ಹಾರೈಸಿದರು. ರಾಮ ಮರಿಯಂಕೂಡ್ಲು , ಚೈಲ್ಡ್ ಲೈನ್ ಸಂಯೋಜಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಜಾತ ಸ್ವಾಗತಿಸಿ, ಸಾಬಿತ್ ವಂದಿಸಿದರು. ಬಳಿಕ ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಜರಗಿತು.
ಚೈಲ್ಡ್ ಲೈನ್ ಕಾಸರಗೋಡು ಆಶ್ರಯದಲ್ಲಿ ಪುಟಾಣಿ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆ
0
ನವೆಂಬರ್ 29, 2022

.jpg)
